ಕಾಯಂ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಗೆ ಚಾಲನೆ: ಶಾಸಕ ದತ್ತ
ಕಡೂರು: ಮದಗದಕೆರೆ ವ್ಯಾಪ್ತಿಯ ಸಾಗುವಳಿದಾರರಿಗೆ ಕಾಯಂ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಹಾಗೂ ಮುಚ್ಚಿರುವ ರೈತರ ಜಮೀನುಗಳ ಹಳೇ ಮಡಬಾಯಿಗಳಿಗೆ ಕೆರೆ ನೀರು ಹರಿಸಲು ಸರ್ಕಾರದಿಂದ ಆದೇಶ ಮಾಡಿಸುವುದಾಗಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಅವರು ಕ್ಷೇತ್ರದ ಎಮ್ಮೇದೊಡ್ಡಿ ಶಿವಾಜಿ ಸಂಯುಕ್ತ ವ್ಯವಸಾಯ ಸೇವಾ ಸಹಕಾರ ಸಂಘದ ರೈತರ ಮುಚ್ಚಿ ಹೋಗಿರುವ ಜಮೀನುಗಳ ಮಡಬಾಯಿಗಳನ್ನು ರೈತರೊಂದಿಗೆ ವೀಕ್ಷಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಡಕೆ ಬೆಳೆಗಾರರ ಸಂಘದ ಶ್ರೀಮಂತರು, ಬಲಿಷ್ಠರು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡು ಮದಗದಕೆರೆಯ ಸಂಪೂರ್ಣ ನೀರು ಅಡಕೆ ಬೆಳೆಗಾರರಿಗೆ ಮಾತ್ರ ಎಂಬಂತೆ ನಡೆದುಕೊಂಡು ಬಗರ್ಹುಕುಂ ಸಾಗುವಳಿದಾರರಿಗೆ ನೀರು ಬಿಡಬಾರದು ಎಂದು ಉಪ ವಿಭಾಗಾಧಿಕಾರಿಗೆ ಸಂಘದಿಂದ ಅರ್ಜಿ ನೀಡಲಾಗಿದೆ. ಬಡವರು, ದಲಿತರ ಪರವಾಗಿ ತಾವು ಹೋರಾಟ ಮಾಡುವುದಾಗಿ ಹೇಳಿ, ಮದಗದಕೆರೆ ನೀರು ಮೊದಲು ಸಾಗುವಳಿದಾರರಿಗೆ ಸಿಗಬೇಕು ಎರ್ದರು ವಿರೋಜಿರಾವ್ ಪವಾರ್ ಅಧ್ಯಕ್ಷತೆ ವಹಿಸಿ ದ್ದರು. ತಾಪಂ ಸದಸ್ಯ ಶಶಿಕುಮಾರ್ ಮಾತನಾಡಿ, ಎಇಇ ಪ್ರಭಾಕರರಾವ್ ಶಿಕ್ಷಕ ಬಿ.ವೈ. ದೇವೋಜೀರಾವ್, ಸಂಗೀತ ಕಲಾವಿದ ಮಹೇಂದ್ರ ಘೋರೆ, ಪರಶುರಾಮ್, ಸಹಾಯಕ ಇಂಜಿನಿಯರ್ ಮಲ್ಲಿಕಾರ್ಜುನ್, ಪಿ.ಸಿ.ಗಂಗಾಧರ್, ಪಿಡಿಒ ಹನುಮಯ್ಯ ಮತ್ತಿತರರು ಉಪಸ್ಥಿತರಿದ್ದರು.