ಅಗತ್ಯ ವಸ್ತುಗಳ ಪಟ್ಟಿಗೆ ಈರುಳ್ಳಿ ಸೇರಿಸಲು ಆಗ್ರಹ
ತರೀಕೆರೆ: ಅಗತ್ಯ ವಸ್ತುಗಳ ಪಟ್ಟಿಗೆ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಸೇರಿಸಬೇಕು ಎಂದು ಕೃಷಿ ಪ್ರಶಸ್ತಿ ಪುರಸ್ಕೃತರು, ಮ್ಯಾಮ್‌ಕೋಸ್ ನಿರ್ದೇಶಕರಾದ ಆರ್.ದೇವಾನಂದ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈರುಳ್ಳಿ ಆಲೂಗೆಡ್ಡೆ ಬೆಲೆಯು ದೇಶಾದ್ಯಂತ ಏರುಮುಖವಾಗಿ ಬಡವರು ಮಧ್ಯಮ ವರ್ಗದವರು ಈರುಳ್ಳಿ ಆಲೂಗಡ್ಡೆಯನ್ನು ಕೊಳ್ಳಲು ಆಗದ ಪರಿಸ್ಥಿತಿ ಬಂದು ಕಣ್ಣಲ್ಲಿ ನೀರು ಸುರಿಸುತ್ತಿದ್ದಾರೆ. ಈರುಳ್ಳಿ ಆಲೂಗೆಡ್ಡೆ ಬೆಲೆ ಏರಿಕೆಯಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಸತ್ಯ ಸಂಗತಿ. ಈರುಳ್ಳಿ ಆಲೂಗಡ್ಡೆ ಬೆಲೆ ಏರಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ ಎಂದಿದ್ದಾರೆ.