ಕತ್ತಲೆ ಕಳೆಯಲು ಜ್ಞಾನದ ಬೆಳಕು ಅವಶ್ಯ: ಸ್ವಾಮೀಜಿ
ಬಾಳೆಹೊನ್ನೂರು: ದುಂದುವೆಚ್ಚ ಮಾಡದೇ ಸರಳ ಸಮಾರಂಭ ಮಾಡುವಲ್ಲಿ ಯುವ ಜನಾಂಗ ಮುಂದಾಗಬೇಕು ಎಂದು ರಂಭಾಪುರಿ ಶಾಖಾ ಮಠದ ಸಂಗೊಳ್ಳಿ ಹೀರೆಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ರಂಭಾಪುರಿ ಪೀಠದ ರುದ್ರಮುನೀಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸರಳ ವಿವಾಹ, ಚುಟುಕು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ಕೇಂದ್ರ ಚುಸಾಪ ಪ್ರಧಾನ ಸಂಚಾಲಕ ಡಾ. ಎಂ.ಜೆ.ಆರ್. ಅರಸ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್ ರಚನೆ ಹಾಗೂ ಸಂಪಾದಕತ್ವದ ವೃಶ್ಚಿಕ ಕವನ ಸಂಕಲವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಹರಿಹರ ಪ್ರಭೋದಿನಿ ಗುರುಕುಲದ ವ್ಯವಸ್ಥಾಪಕ ಉಮೇಶ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ಜಿಪಂ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ಬೇಲೂರಿನ ಅನ್ನಪೂರ್ಣಮ್ಮ ಗಣೇಶ್, ರಂಭಾಪುರಿ ಪೀಠದ ವ್ಯವಸ್ಥಾಪಕ ಸಂಕಪ್ಪ, ಬಳಕೆದಾರರ ವೇದಿಕೆಯ ಶಂಕರನಾರಾಯಣಭಟ್, ನೂತನ ದಂಪತಿ ಸೌಮ್ಯ ಶಿಶಿರ ಉಪಸ್ಥಿತರಿದ್ದರು.