ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕಾನೂನು ಸೇವೆಯಲ್ಲಿ ಮಾನವೀಯತೆ ಇರಲಿ'

Mainashree
Updated On : 4 Jul 2014, 9:40 am

ಚಿಕ್ಕಮಗಳೂರು: ಜನಸಾಮಾನ್ಯರಿಗೆ ಕಾಯ್ದೆಗಳ ಧ್ಯೇಯ ತಲುಪಿಸುವಂತೆ ಹಾಗೂ ಕಾನೂನುಗಳ ಜೊತೆಗೆ ಮಾನವೀಯತೆಯಿಂದ ಕೆಲಸ ನಿರ್ವಹಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಚ್.ಎಸ್. ಕಮಲ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕಾನೂನು ಸಾಕ್ಷರತಾ ರಥ ಪ್ರವಾಸದ ಅಂಗವಾಗಿ ಕಂದಾಯ ಇಲಾಖೆ ಹಾಗೂ ನಗರಸಭಾ ಸಿಬ್ಬಂದಿಗೆ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಅಧ್ಯಕ್ಷತೆ ವಹಿಸಿದ್ದು, ಆಗಿಂದ್ದಾಗೆ ಕಾಯ್ದೆಗಳಲ್ಲಾಗುವ ತಿದ್ದುಪಡಿಗಳನ್ನು ಗಮನಿಸಿ, ದಿನನಿತ್ಯದ ಕರ್ತವ್ಯದಲ್ಲಿ ಬಳಕೆ ಮಾಡಿಕೊಂಡಲ್ಲಿ ಕೆಲಸದಲ್ಲಿ ತಪ್ಪುಗಳಾಗದಂತೆ ಜಾಗ್ರತೆ ವಹಿಸಬಹುದೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ವಕೀಲ ಎಂ. ಗೋಪಿನಾಥ್ ಅವರು ಭೂಕಂದಾಯ ಅಧಿನಿಯಮ, ವಕೀಲ ಜಿ.ಎಂ. ಜಯಕುಮಾರ್ ಕರ್ನಾಟಕ ಮನ್ಸಿಪಾಲಿಟಿ ಕಾಯ್ದೆ- 1994  ಕುರಿತು ಉಪನ್ಯಾಸ ನೀಡಿದರು.
ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಕೆ.ಎಸ್. ತಿಮ್ಮಣ್ಣಾಚಾರ್, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಂ. ಕೋಮಲತಾ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ. ನಂದಕುಮಾರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಜಯಂತಕುಮಾರ್, ನ್ಯಾಯಾಧೀಶ ದಯಾನಂದ ವಿ.ಎಚ್. ಪದ್ಮಪ್ರಸಾದ್, ಎನ್. ಸುಬ್ರಹ್ಮಣ್ಯ, ಎಂ.ಎಂ. ನಿವೇದಿತ, ಪ್ರಿಯಾ ಆರ್. ಜೋಗಲೇಕರ್, ವಕೀಲರ ಸಂಘದ ಅಧ್ಯಕ್ಷ ಅಫ್ತಾಬ್ ಅಹಮದ್, ನಗರಸಭಾ ಆಯುಕ್ತ ನಾಗಭೂಷಣ್, ಉಪ ವಿಭಾಗಾಧಿಕಾರಿ ಚನ್ನಬಸಪ್ಪ ಕೆ. ತಹಸೀಲ್ದಾರ್ ಶಿವಣ್ಣ ಉಪಸ್ಥಿತರಿದ್ದರು. ಮುರಳಿ ಪ್ರಾರ್ಥಿಸಿ, ಕಾಂತರಾಜ್ ಸ್ವಾಗತಿಸಿ, ಎಚ್.ಎಸ್.ಸುರೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement