ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪರಿಸರ ರಕ್ಷಣೆ ಎಲ್ಲರ ಹೊಣೆ

Mainashree
Updated On : 4 Jul 2014, 9:41 am

ಶೃಂಗೇರಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಹಾಗೂ ಕರ್ತವ್ಯ. ವನಮಹೋತ್ಸವ, ಪರಿಸರದಿನ ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಿರದೇ ಕಾರ್ಯರೂಪಕ್ಕೆ ಬರಬೇಕು ಎಂದು ಶೃಂಗೇರಿ ವಲಯ ಅರಣ್ಯಾಧಿಕಾರಿ ಮೋಹನ್ ಬಿದರಿ ಹೇಳಿದರು.
ಪಟ್ಟಣದ ಹನುಮಂತನಗರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ, ಪರಿಸರ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ಇದ್ದಂತೆ: ಪರಿಸರ ಎಂಬುದು ಒಂದು ಬ್ಯಾಂಕ್ ಇದ್ದಂತೆ. ಇದಕ್ಕೆ ಪಾಸ್ ಬುಕ್, ಎಟಿಎಂ ಕಾರ್ಡ್‌ಗಳು ಬೇಡ. ನಾವು ಪರಿಸರ ಕಾಪಾಡಿದರೆ ನಮಗೆ ಒಳ್ಳೆ ಗಾಳಿ, ಬೆಳಕು, ಉತ್ತಮ ಆರೋಗ್ಯ, ನೆಮ್ಮದಿಯ ಜೀವನ ಸಿಗುತ್ತದೆ. ಪರಿಸರಕ್ಕೆ ಯಾವುದೇ ಗಡಿ ಇಲ್ಲ. ನಮಗೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ಕೆಲಮೊಮ್ಮೆ ಪರಿಸರ  ಹಾಳು ಮಾಡುತ್ತೇವೆ. ಆದರೆ ಇದರ ಬಗ್ಗೆ ತಿಳಿದುಕೊಂಡು ಸರಿಪಡಿಸಿ ಪರಿಸರ ಸಂರಕ್ಷಣೆ ಮಾಡಬೇಕು. ಎಲ್ಲವನ್ನೂ ಹಣದ ರೂಪದಲ್ಲಿ ನೋಡದೇ ಪರಿಸರದ ರೂಪದಲ್ಲಿ ನೋಡಬೇಕು.
ಪರಿಸರ ಇರುವುದು ನಮಗಾಗಿ. ಪರಿಸರದ ಹಾನಿಯೂ ನಮ್ಮಿಂದ ಆಗುತ್ತಿದೆ. ರಕ್ಷಣೆಯೂ ನಮ್ಮಿಂದ ನಡೆಯಬೇಕಿದೆ. ನಮ್ಮ ವಿಚಾರಧಾರೆ ಬದಲಾವಣೆಯಾಗಬೇಕಿದೆ. ಗಿಡ, ಮರ, ಅರಣ್ಯ ಇಲ್ಲದಿದ್ದರೆ ಮನುಷ್ಯ ಇರಲು ಸಾಧ್ಯವಿರುತ್ತಿರಲಿಲ್ಲ. ಆದರೆ ಮನುಷ್ಯನೇ ಇಲ್ಲದಿದ್ದರೂ ಆಗುತ್ತಿರಲಿಲ್ಲ. ಅತಿ ಬೇಗ ನಶಿಸಿಹೋಗುವ ಪ್ರಾಣಿ ಮನುಷ್ಯನಾಗಿದ್ದಾನೆ. ಇದೇ ರೀತಿ ಪರಿಸರ ನಾಶ ನಡೆಯುತ್ತಿದ್ದರೆ ಮುಂದಿನ ಪೀಳಿಗೆಗೆ ಪರಿಸರ ಉಳಿಯುವುದಿಲ್ಲ ಎಂದರು.
ಪಪಂ ಅಧ್ಯಕ್ಷೆ ಶೋಭಾ ಅನಂತಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಕೆ.ಜಿ.ಸಿದ್ದಲಿಂಗೇಗೌಡ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನೆಮ್ಮಾರ್ ಅಬೂಬಕರ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಧಿಕ್ ಅಹ್ಮದ್, ಪಪಂ ಮುಖ್ಯಾಧಿಕಾರಿ ಅಶೋಕ್, ಸದಸ್ಯೆ ಶಾರದಾ ಗೋಪಾಲ್ ಮೊದಲಾದವರು ಇದ್ದರು.
ಪಪಂ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹನುಮಂತನಗರ ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement