ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಲೆನಾಡಲ್ಲಿ 4 ದಿನದೊಳಗೆ ಮಳೆಯಾಗದಿದ್ದಲ್ಲಿ ಬರ: ನಿಂಗಯ್ಯ

Mainashree
Updated On : 6 Jul 2014, 10:29 am

ಮೂಡಿಗೆರೆ: ಇನ್ನು ನಾಲ್ಕು ದಿನದೊಳಗೆ ಮಳೆ ಬಾರದೆ ಇದ್ದಲ್ಲಿ ಮಲೆನಾಡನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರದೊಂದಿಗೆ ಜತೆ ಮಾತುಕತೆ ನಡೆಸುವುದಾಗಿ ಶಾಸಕ ಬಿ.ಬಿ. ನಿಂಗಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡು ಭಾಗದಲ್ಲಿ ರೈತರು ಕಾಫಿ, ಅಡಕೆ, ಏಲಕ್ಕಿ ಮತ್ತು ಬತ್ತದ ಬೆಳೆ ಮೇಲೆ ಅವಲಂಬಿಸಿಕೊಂಡಿದ್ದು, ಮಳೆರಾಯನ ಮುನಿಸಿನಿಂದ ಬರದ ಛಾಯೆ ಆವರಿಸುತ್ತಿದ್ದು, ಬೆಳೆಗಳು ವಿನಾಸದ ಅಂಚನ್ನು ತಲುಪಿದ್ದರೆ ಮತ್ತೊಂದಡೆ ಕಾಫಿ ಗಿಡಗಳಲ್ಲಿ ಬೋರಾರ್ ಹಾವಳಿ ಅಧಿಕವಾಗಿದೆ. ಕಾಫಿ ಗಿಡಗಳು ನಾಶವಾಗುತ್ತಿದೆ. ಕಾಫಿಗೆ ಉತ್ತಮ ಬೆಲೆ ಇದೆ. ಆದರೆ, ಬೆಳೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ ಎಂದರು. ಕಂದಾಯ ಇಲಾಖೆ, ತೋಟಗಾರಿಕಾ, ಸಾಂಬಾರ್ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ತೋಟ ಮತ್ತು ಗದ್ದೆಗಳಿಗೆ ಭೇಟಿ ನೀಡಿ ಸಮಗ್ರ ವರದಿಯನ್ನು ತಮಗೆ ತಲುಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಆ ವರದಿಯನ್ನು ಸರ್ಕಾರದ ಮುಂದಿಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರಾಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement