ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಳಪೆ ಗೋದಿ ವಿತರಿಸಿ ಸರ್ಕಾರಕ್ಕೆ ಕೆಟ್ಟಹೆಸರು ತರಲು ಸಂಚು: ಆರೋಪ

Mainashree
Updated On : 9 Jul 2014, 10:03 am

ಕೊಪ್ಪ: ಪಡಿತರ ವಿತರಣೆಯಲ್ಲಿ ಕಳಪೆ ಗೋದಿ ವಿತರಿಸಿ, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಶಾಸಕರು, ಬಿಜೆಪಿ ಜನ ಪ್ರತಿನಿಧಿಗಳು ಸಂಚು ನಡೆಸಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶೋಭಿಂತ್ ಆರೋಪಿಸಿದ್ದಾರೆ.
ಇತ್ತೀಚೆಗೆ ಹೇರೂರಿನಲ್ಲಿ ಪಡಿತರ ಗೋಧಿಯನ್ನು ಬೀದಿಗೆ ಸುರಿದು ಪ್ರತಿಭಟಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಆಹಾರ ಸರಬರಾಜು ನಿಗಮದಿಂದ ಅತ್ಯುತ್ತಮ ಗೋಧಿಯನ್ನು ಎತ್ತುವಳಿ ಮಾಡಿದ್ದರು.ಇಲ್ಲಿನ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಸಂಗ್ರಹಿಸಿಟ್ಟು ಮೂರು ತಿಂಗಳ ನಂತರ ವಿತರಣೆಗೆ ಬಿಡುಗಡೆ ಮಾಡಿರುವುದರಿಂದ ಗೋಧಿ ಕೆಟ್ಟು ಹೋಗಿದೆ.
ಪಡಿತರ ಗೋಧಿ ಕೆಡಲು ಪ್ರಮುಖ ವಿತರಕ ಟಿಎಪಿಸಿಎಂಎಸ್ ಕಾರಣವಾಗಿದೆ. ಶಾಸಕರ ಅಭಿವೃದ್ಧಿ ಪರಿಶೀಲನಾ ಸಭೆಗೆ ಸಂಸ್ಥೆ ಅಧ್ಯಕ್ಷರು ಕಾರ್ಯದರ್ಶಿಗಳು ಪಾಲ್ಗೊಂಡಿದ್ದರೂ, ಈ ಬಗ್ಗೆ ಪರಾಮರ್ಶೆ ಮಾಡದೇ ಕಳಪೆ ಗೋಧಿಯನ್ನು ಸಹಕಾರ ಸಂಘಗಳಿಗೆ ವಿತರಿಸಿರುವ ಹಿಂದಿರುವ ಉದ್ದೇಶ ಏನೆಂದು ಅವರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement