ಶಂಕರಾಚಾರ್ಯರು ಹಿಂದು ಧರ್ಮದ ಪುನರುದ್ಧಾರಕ
ಜಯಪುರ: ಶಂಕರಾಚಾರ್ಯರು ಭಾರತದ ಮಹಾಪುರುಷರು, ಹಿಂದೂ ಧರ್ಮದ ಪುನರುದ್ಧಾಕರು. ಚಿಕ್ಕ ವಯಸ್ಸಿನಲ್ಲೇ ಅವರ ಸಾಧನೆ ಅನುಪಮವಾದುದು ಎಂದು ಶೃಂಗೇರಿ ಬಿಜಿಎಸ್ ಬಿಎಡ್ ಕಾಲೇಜಿನ ಉಪನ್ಯಾಸಕ ಎಂ.ವಿ. ಗಂಗಾಧರ್ ಹೇಳಿದರು.
ಜಯಪುರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದ ಅವರು, ಶಂಕರರ ತತ್ವ ಸಾಧನೆಗಳು ಭಾರತೀಯ ಧರ್ಮದ ಕೀರ್ತಿಯನ್ನು ಜಗತ್ತಿನೆಲ್ಲೆಡೆ ಹಬ್ಬಿಸಿದೆ. ಉತ್ತರದಿಂದ ದಕ್ಷಿಣದವರೆಗೆ ವ್ಯಾಪಕವಾಗಿರುವ ನಮ್ಮ ಜನ್ಮಭೂಮಿ ಹಾಗೂ ಕರ್ಮ ಭೂಮಿಯನ್ನು ನಾವು ಗೌರವಿಸಬೇಕು, ಯಾವ ಧರ್ಮವೂ ಹಿಂಸೆ ಮಾಡು ಎಂದು ಎಲ್ಲಿಯೂ ಹೇಳಿಲ್ಲ, ಹೇಳುವುದೂ ಇಲ್ಲ ಎಂದರು.
ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ಸೀತಾರಾಮ್ ಭಟ್ಟರು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ನೆ.ಲ. ಸುಬ್ರಮಣ್ಯ ಹಾಗೂ ಜಯಪುರದ ನುಡಿಚಿತ್ರ ಕಲಾವಿದ ಶಂ.ನ. ಶೇಷಗಿರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಮಹಿಳೆಯರು ಶಿವಾನಂದ ಲಹರಿ ಹಾಗೂ ಸೌಂದರ್ಯ ಲಹರಿ ಪಠಿಸಿದರು. ಕಾರ್ಯಕ್ರಮದಲ್ಲಿ ಶಂ.ನ. ಶೇಷಗಿರಿ ಶಂಕರಾಚಾರ್ಯರ ಬಗ್ಗೆ 50ಕ್ಕೂ ಹೆಚ್ಚು ನುಡಿಚಿತ್ರ ಪ್ರದರ್ಶಿಸಿದರು.