ಬ್ಯಾಂಕಿಂಗ್ ಜೀವನದ ಅವಿಭಾಜ್ಯ ಅಂಗ
ನರಸಿಂಹರಾಜಪುರ: ಪ್ರಸ್ತುತ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಪಟ್ಟಣದ ಡಿ.ಸಿ.ಎಂ.ಸಿ. ಶಾಲೆ ಕಾರ್ಯದರ್ಶಿ ಎಚ್.ಟಿ. ರಾಜೇಂದ್ರ ತಿಳಿಸಿದರು.
ಇಲ್ಲಿನ ದೀಪ್ತಿ ಪ್ರೌಢಶಾಲೆ ಮುಂಭಾಗದ ಎಚ್.ಸಿ. ಶಿವಪ್ಪ ಆರ್ಕೆಡ್ನಲ್ಲಿ ಗುರುವಾರ ಕಾರ್ಪೊರೇಶನ್ ಬ್ಯಾಂಕ್ ಎನ್.ಆರ್.ಪುರ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಆರ್ಥಿಕ ಅಭಿವೃದ್ಧಿಯೂ ಮುಖ್ಯ; ಸಾಮಾಜಿಕ ಬೆಳವಣಿಗೆಯಲ್ಲಿ ಆರ್ಥಿಕ ಅಭಿವೃದ್ಧಿಯೂ ಅತಿ ಮುಖ್ಯ. ಜಾಗತೀಕರಣದ ಇಂದಿನ ದಿನಗಳಲ್ಲಿ ಆರ್ಥಕ ಚಟುವಟಿಕೆ ಕೈಗೊಳ್ಳಲು ಹಣದ ಹೂಡಿಕೆ ಅವಶ್ಯಕ. ನಾಗರಿಕ ಸಮಾಜದಲ್ಲಿ ಎಲ್ಲರೂ ಹಣ ಇಟ್ಟುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಭವಿಷ್ಯದ ಬೆಳವಣಿಗೆಗೆ ಬ್ಯಾಂಕ್ ವ್ಯವಹಾರ ಅತ್ಯವಶ್ಯಕ ಎಂದವರು ಹೇಳಿದರು.
ಬ್ಯಾಂಕ್ ಶಾಖೆ ಉದ್ಘಾಟಿಸಿ ಮಾತನಾಡಿದ ಪಪಂ ಅಧ್ಯಕ್ಷೆ ಲೇಖಾವಸಂತ್ ಮಾತನಾಡಿ, ಸ್ತ್ರೀಶಕ್ತಿ ಸಂಘಗಳು ಹಾಗೂ ಸ್ವಸಹಾಯಸಂಘಗಳು ಹೆಚ್ಚಾಗಿರುವುದರಿಂದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕುಗಳು ಉತ್ತಮ ಸಹಕಾರ ನೀಡಬೇಕೆಂದರು. ಅಧ್ಯಕ್ಷತೆಯನ್ನು ಬ್ಯಾಂಕ್ನ್ ಉಪ ಮಹಾ ಪ್ರಬಂಧಕ ವಿ.ಎನ್.ಹೆಗ್ಡೆ ವಹಿಸಿದ್ದರು. ಲೀಡ್ ಬ್ಯಾಂಕ್ನ ಮಹೇಶ್ವರಪ್ಪ, ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ಡಿ. ಜಗದೀಶ್ ಕಾಮತ್ ಇದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕ್ ಕಟ್ಟಡ ಒದಗಿಸಿದ ಮಾಲೀಕ ಎಚ್.ಸಿ. ಶಿವಪ್ಪ ದಂಪತಿಯನ್ನು ಬ್ಯಾಂಕ್ನಿಂದ ಅಭಿನಂದಿಸಲಾಯಿತು.