ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹುಲುಕೋಡು ಶಾಲೆ ಸೂರು ಕುಸಿಯುವ ಭೀತಿ

Mainashree
Updated On : 11 Jul 2014, 10:30 am

ಕೊಪ್ಪ: ತಾಲೂಕಿನ ಹುಲುಕೋಡು ಪ್ರಾಥಮಿಕ ಶಾಲೆಯ ಕೊಠಡಿಯ ಸೂರು ಕುಸಿಯುವ ಹಂತದಲ್ಲಿದ್ದು, ಶೀಘ್ರ ದುರಸ್ಥಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ರೂ.80 ಸಾವಿರ ವೆಚ್ಚದಲ್ಲಿ ಜಿಪಂ ಇಂಜಿನಿಯರಿಂಗ್ ವಿಭಾಗ ತಾಲೂಕಿನ ಭಂಡಿಗಡಿ ಗ್ರಾಪಂ ವ್ಯಾಪ್ತಿಯ ಹುಲುಕೋಡು ಪ್ರಾಥಮಿಕ ಶಾಲೆಯ ಚಾವಣಿ ದುರಸ್ಥಿಯನ್ನೇನೋ ನಿರ್ವಹಿಸಿತ್ತು. ದುರಸ್ಥಿ ವೇಳೆ ಚಾವಣಿಯ ಬೆಂಕ್ಟೇ (ಮುಖ್ಯ ಆಧಾರ ಮರದ ತೊಲೆ)ಕತ್ತರಿಸುವಾಗ ಮಾಡಿದ ಲೋಪದಿಂದ ಚಾವಣಿ ಒಂದು ಕಡೆ ವಾಲಲಾರಂಭಿಸಿತು. ಅಪಾಯ ಮನಗಂಡು ಸ್ಥಳೀಯರು ಅಕೇಶಿಯಾ ಮರದ ಕಂಬವನ್ನು ಆಧಾರವಾಗಿ ನೀಡಿ ಚಾವಣಿ ಕುಸಿತ ತಡೆದಿದ್ದು, ಜೋರು ಗಾಳಿ ಮಳೆಗೆ ಕುಸಿಯುವ ಅಪಾಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಾವಲ್ಮನೆ ಹಾಗೂ ಭಂಡಿಗಡಿ ಗ್ರಾಪಂ ವ್ಯಾಪ್ತಿಯ 20 ಗ್ರಾಮಗಳಿಂದ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿದ್ದು, ಶಾಲೆ ಸುರಕ್ಷಿತವಾಗದಿದ್ದಲ್ಲಿ ಬೇರೆ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವ ಅನಿವಾರ್ಯತೆ ಬರಲಿದೆ. ಕಡಿಮೆ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳು ಬೇರೆ ಶಾಲೆಗಳಲ್ಲಿ ಪ್ರವೇಶ ಪಡೆದರೆ ಶಾಲೆ ಮುಚ್ಚುವ ಸ್ಥಿತಿ ನಿರ್ಮಾಣವಾದಿತ್ತೆಂದು ಗ್ರಾಮಸ್ಥಾರು ಆತಂಕ ವ್ಯಕ್ತಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement