ಜನಸಂಖ್ಯೆ ನಿಯಂತ್ರಿಸದಿದ್ದರೆ ಆಪತ್ತು ತಪ್ಪದು
ಮೂಡಿಗೆರೆ: ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಆಪತ್ತು ತಪ್ಪಿದ್ದಲ್ಲ ಎಂದು ಡಿ.ಎಸ್.ಬಿಳಿಗೌಡ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೊ.ಲಕ್ಷ್ಮೀಕಾಂತ್ ಆತಂಕ ವ್ಯಕ್ತಪಡಿಸಿದರು.
ಅವರು ಶುಕ್ರವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಮಾತನಾಡಿದರು.
ಜನಸಂಖ್ಯೆ ಹೆಚ್ಚಾದಂತೆ ಆಹಾರ ಉತ್ಪಾದನೆ, ನೈಸರ್ಗಿಕ ಸಂಪತ್ತು ನಾಶ, ವಾಯುಮಾಲಿನ್ಯ, ಜಲಮಾಲಿನ್ಯಗಳಿಗೆ ಕಾರಣವಾಗುತ್ತದೆ. ಜಗತ್ತಿನಲ್ಲಿ ಪ್ರತೀ ವರ್ಷ 79 ದಶಲಕ್ಷ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಲಯನ್ಸ್ ಅಧ್ಯಕ್ಷ ಹೇಮಶೇಖರ್, ಜನಸಂಖ್ಯಾ ನಿಯಂತ್ರಣಕ್ಕೆ ಕೇಂದ್ರ ಸದೃಝ ಕಾಯ್ದೆ ರೂಪಿಸುವುದು ಅಗತ್ಯ ಎಂದರು. ತಾಪಂ ಉಪಾಧ್ಯಕ್ಷೆ ಸರೋಜಾ ಮತ್ತು ಪಪಂ ಅಧ್ಯಕ್ಷೆ ಪಾರ್ವತಮ್ಮ ಉದ್ಘಾಟಿಸಿದರು. ಜಿಪಂ ಸದಸ್ಯ ಅರೆಕುಡಿಗೆ ಶಿವಣ್ಣ, ತಾಪಂ ಸದಸ್ಯ ಎ.ಜೆ.ಸುಬ್ರಾಯಗೌಡ, ಜೆಸಿಐ ಅಧ್ಯಕ್ಷ ರತೀಶ್ ಬೆಟ್ಟಗೆರೆ, ಕಾಲೇಜು ಪ್ರಾಂಶುಪಾಲ ಎಚ್.ಎಸ್.ಜಗದೀಶಪ್ಪ, ಶಿರಸ್ತೇದಾರ್ ಹರೀಶ್, ರವಿ, ಎಂಜಿಎಂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಉಮಾಶಂಕರ್, ತಾ. ಆರೋಗ್ಯಾಧಿಕಾರಿ ಯೋಗೀಶ್, ಡಿ.ಮೂರ್ತಿ ಇದ್ದರು.