ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಡಿವ ನೀರಿನ ಯೋಜನೆಗೆ ಹಣ

Mainashree
Updated On : 13 Jul 2014, 11:07 am

ಚಳ್ಳಕೆರೆ: ಕಳೆದ ಎರಡು ದಿನಗಳಿಂದ ಸಾಯಿನಗರದ ಶಿರಡಿ ಶ್ರೀ ಸತ್ಯಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ಶ್ರೀ ಸತ್ಯನಾರಾಯಣಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿ ನಡೆದಿವೆ.
  ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಜನರ ಕಲ್ಯಾಣ, ಮಳೆಗಾಗಿ ದೇವರಲ್ಲಿ ಮೊರೆ ಇಟ್ಟಿದ್ದಾರೆ.
 ಶಾಸಕನಾಗಿ ಇಂತಹ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಧಾರ್ಮಿಕ ಭಾವನೆಗಳು ಬೆಳೆಯಲು ಶ್ರೀ ವೆಂಕಟಸಾಯಿ ಸೇವಾ ಟ್ರಸ್ಟ್ ಶ್ರಮಿಸಿದ್ದು ಅವರನ್ನು ಅಭಿನಂದಿಸುವುದಾಗಿ ಕ್ಷೇತ್ರದ ಶಾಸಕರಾರ  ರಘುಮೂರ್ತಿ ತಿಳಿಸಿದ್ದಾರೆ.
ಶನಿವಾರ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಆಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ವಿಶೇಷವಾಗಿ ಕ್ಷೇತ್ರ ಹಾಗೂ ಪಟ್ಟಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದ ಕುಡಿಯುವ ನೀರನ್ನು ಒದಗಿಸಲು ವಿಶೇಷ ಯೋಜನೆಯಡಿ ಹಣವನ್ನು ನೀಡಲಾಗಿದೆ. ಈ ವರ್ಷವೂ ಸಹ ಉತ್ತಮ ಮಳೆಯಾಗಿ ರೈತರು ಬಾಳಿನಲ್ಲಿ ಹೊಸ ಬೆಳಕು ಕಾಣಲಿ ಎಂದು ಶುಭಹಾರೈಸಿದರು.
ದೊಡ್ಡೇರಿ ಕನ್ನೇಶ್ವರ ಆಶ್ರಮದ ಸತ್ ಉಪಾಸಿ ದತ್ತಾವಧೂತ ಮಲ್ಲಿಕಾರ್ಜುನ ಸ್ವಾಮೀಜಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
  ಗುರು ಪೌರ್ಣಿಮೆ ಮಹತ್ವವನ್ನು ಕುರಿತು ಉಪನ್ಯಾಸ ನೀಡಿದ ವಿದ್ವಾನ್ ಗಣಪತಿ ಭಟ್, ಕೃತಿ ದತ್ತವಾಗಿ ಭಗವಂತನು ನಮಗೆ ಅನೇಕ ಕೊಡುಗೆಗಳನ್ನು ನೀಡಿದ್ದಾನೆ. ಸಕಾಲದಲ್ಲಿ ವರುಣನ ಪ್ರವೇಶವಾಗುವುದು ಅವನ ದಯೆಯಿಂದ ಮಾತ್ರ. ಪ್ರತಿಯೊಬ್ಬರಿಗೂ ದೇವರ ಒಲವಿನಂತೆ ಗುರುಗಳ ಆಶೀರ್ವಾದವು ಬೇಕಾಗುತ್ತದೆ ಎಂದರು.
  ಈ ಭಾಗದ ಲಕ್ಷಾಂತರ ಜನರ ಆರಾಧ್ಯ ದೈವ ಗುರುವಿನ ಸ್ಥಾನದಲ್ಲಿರುವ ಶ್ರೀ ಸಾಯಿಬಾಬಾರವರರೆ ಎಲ್ಲರಿಗೂ ಪ್ರೇರಣೆ ನೀಡಿ ಇಲ್ಲಿ ಭವ್ಯ ಮಂದಿರದ ನಿರ್ಮಾಣಕ್ಕೆ ನಿಮ್ಮೆಲ್ಲರಿಗೂ ಆಶೀರ್ವದಿಸಿದ್ದಾರೆಂದರು..
  ಕಾರ್ಯಕ್ರಮವನ್ನು ಉದ್ದೇಶಿಸಿ ನಿರ್ಗಮನ ತಹಶೀಲ್ದಾರ್ ಎಚ್.ವಿ. ವಿಜಯರಾಜು, ಟ್ರಸ್ಟ್ನ ಗೌರವ ಸಲಹೆಗಾರ ಅನಂತರಾಮ್ಗೌತಮ್, ಯು.ಎಸ್. ವಿಷ್ಣುಮೂರ್ತಿ ರಾವ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಎಂ. ಮಂಜುನಾಥ್, ಎಪಿಎಂಸಿ ಅಧ್ಯಕ್ಷ ರಾಮಬಾಬು, ಮಾಕಂ ಶ್ರೀನಿವಾಸಲು, ಕಾರ್ಯದರ್ಶಿ ರಾಮಪ್ರಸಾದ್, ಬಿ.ಕೆ. ರಾಜಶೇಖರಪ್ಪ, ಸಾಯಿದೇವನ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ವಹಿಸಿದ್ದರು. ನಿರ್ದೇಶಕ ಬಿ.ಸಿ. ವೆಂಕಟೇಶ್ಮೂರ್ತಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement