ಕಳಸ-ಹೊರನಾಡು ಸಂಪರ್ಕ ಕಡಿತ
ಮೂಡಿಗೆರೆ: ತಾಲೂಕಿನಾದ್ಯಂತ ಮಳೆ ಶನಿವಾರ ತನ್ನ ಆರ್ಭಟ ಮುಂದುವರೆಸಿದ ಪರಿಣಾಮ ತಾಲೂಕಿನ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.
ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹೆಬ್ಬಾಳೆ ಸೇತುವೆ ಮುಳುಗಿದ ಕಾರಣ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡು ಪ್ರಯಾಣಿಕರು ಪರದಾಡ ಬೇಕಾಯಿತು.
ಹೊರನಾಡಿಗೆ ತೆರಳಬೇಕಾದ ಭಕ್ತರು ಬಲಿಗೆ, ಚಿಕ್ಕನಕುಡಿಗೆ, ದಾರಿಮನೆ, ಮಾವಿನಹೊಲ ಮುಂತಾದ ಗ್ರಾಮಗಳಿಗೆ ತೆರಳುವ ಗ್ರಾಮಸ್ಥರು ಕೂಡಾ ಸೇತುವೆ ಮುಳುಗಡೆ ಪರಿಣಾಮ ತೊಂದರೆ ಅನುಭವಿಸುವಂತಾ ಯಿತು. ಮುಂಜಾಗ್ರತಾ ಕ್ರಮವಾಗಿ ಹೆಬ್ಬಾಳೆ ಸೇತುವೆ ಸಮೀಪ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಕುದುರೆಮುಖ, ಬಾಳೆಹೊನ್ನುರು ರಸ್ತೆ ಸಂಪರ್ಕ ಕೂಡಾ ಕಡಿತಗೊಳ್ಳುವ ಸಂಭವವಿದೆ.