ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೂರದೃಷ್ಟಿ ಇಲ್ಲದ ಕೇಂದ್ರ ಬಜೆಟ್: ಕಾಂಗ್ರೆಸ್ ಟೀಕೆ

Mainashree
Updated On : 15 Jul 2014, 10:29 am

ಮೂಡಿಗೆರೆ: ಹಣಕಾಸು ಸಚಿವ ಅರುಣ್ ಜೇಟ್ಲಿ ಹೊಸತನ, ದೂರದೃಷ್ಟಿ ಇಲ್ಲದ ಬಜೆಟ್ ಮಂಡಿಸಿ ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ನೀಡಿದ್ದ ಭರವಸೆ  ಹುಸಿಗೊಳಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಎಸ್. ಅನಂತು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಪೊರೇಟ್ ಕಂಪೆನಿಗಳ ಹಾಗೂ ಬಂಡವಾಳಶಾಹಿಗಳನ್ನು ಮೆಚ್ಚಿಸುವಂತೆ ಬಜೆಟ್ ರೂಪಿಸಲಾಗಿದೆ. ಮೋದಿ ಸರ್ಕಾರ ದೇಶದ ಬಹುಸಂಖ್ಯಾತ ಬಡವರ ಅನುಕೂಲಕ್ಕಾಗಿ ಯಾವುದೇ ಯೋಜನೆ ಜಾರಿಗೊಳಿಸದಿರುವುದು ಖಂಡನೀಯ ಎಂದರು.
ಬಜೆಟ್ ಮಂಡನೆಗೂ ಮುನ್ನವೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ದರ ಏರಿಸಿದೆ. ಬೆಲೆ ಏರಿಕೆಯಿಂದ ನರಳುತ್ತಿರುವ ಸಾಮಾನ್ಯರಿಗೆ ಕೆಲವು ವಸ್ತುಗಳ ದರ ಇಳಿಕೆ ಮಾಡಿದಂತೆ ಮಾಡಿ ಬಜೆಟಟ್ಮಂಡನೆಯಲ್ಲಿ ಬಡವರ ಮೂಗಿಗೆ ತುಪ್ಪ ಸವರಿದೆ ಎಂದರು.
ದೇಶದ ಬಲಿಷ್ಠ ಶಕ್ತಿಗಳಿಗೆ ಮಾತ್ರ ಪೂರಕ ವಾತಾವರಣ ಸೃಷ್ಟಿಸುವಂತೆ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಬಡವರ ಕನಸುಗಳಿಗೆ ಮಾರಕವಾಗಿದೆ ಎಂದವರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement