ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇನಾಂ ಭೂಮಿ ತೆರವು ಬೇಡ

Rashmi Kasaragodu
Updated On : 17 Jul 2014, 11:26 am

ಚಿಕ್ಕಮಗಳೂರು: ಇನಾಂ ಹಾಗೂ ಕಂದಾಯ ಒತ್ತುವರಿ ತೆರವುಗೊಳಿಸಬಾರದು ಎಂದು ಜಿಲ್ಲಾ ಕೃಷಿಕ ಸಮಾಜ ಜಿಲ್ಲಾಡಳಿತವನ್ನು ಆಗ್ರಹಿಸಿ, ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು 6777 ಹೆಕ್ಟೇರ್ ಇನಾಂ ಭೂಮಿ ಮತ್ತು ಒತ್ತವರಿ ಕಂದಾಯ ಭೂಮಿ ಇದ್ದು, ಇದರಲ್ಲಿ ಸುಮಾರು 2000 ಎಕರೆಯಲ್ಲಿ ಕೃಷಿ ಮತ್ತು ಪ್ಲಾಂಟೇಷನ್ ಬೆಳೆ ಬೆಳೆಯುತ್ತಾ, ತಲೆತಲಾಂತರದಿಂದ ಮನೆ ಮತ್ತು ಗುಡಿಸಲು ಕಟ್ಟಿಕೊಂಡು ಜಾನುವಾರುಗಳನ್ನು ಸಾಕಿ ಕೃಷಿ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ರೈತರಿಗೆ ಈ ಭೂಮಿ ಬಿಟ್ಟು ಬೇರೆ ಕೃಷಿ ಭೂಮಿ ಇಲ್ಲ. ಆದ್ದರಿಂದ ಇವರನ್ನು ಒಕ್ಕಲೆಬ್ಬಿಸದೆ ಮಾನವೀಯ ಅಧಾರದಿಂದ ಈ  ಇನಾಂ ಭೂಮಿ ಮತ್ತು ಒತ್ತುವರಿ ಕಂದಾಯ ಭೂಮಿ ಸಕ್ರಮಗೊಳಿಸಬೇಕೆಂದು ಆಗ್ರಹಿಸಿದರು.
ಬಂದೂಕು ಪರವಾನಗಿ ನವೀಕರಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರಬೇಕು. ಇದರಿಂದ ದೂರದ ಊರುಗಳಿಂದ ಬರುವವರಿಗೆ ತುಂಬಾ ತೊಂದರೆಯಾಗುತ್ತಿದೆ. ತಾಲೂಕು ಕೇಂದ್ರಗಳಲ್ಲಿ ತಹಸೀಲ್ದಾರ್ ಕಚೇರಿಗಳಲ್ಲಿ ಪರವಾನಗಿ ನವೀಕರಣ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ. ನರೇಂದ್ರ, ಉಪಾಧ್ಯಕ್ಷ ಜಿ.ಬಿ. ಮಂಜುನಾಥ್, ಜಿಪಂ ಸದಸ್ಯ ರಂಗನಾಥ್, ಎ.ಕೆ. ವಸಂತಗೌಡ, ಕೆ.ಎಚ್. ಕುಮಾರಸ್ವಾಮಿ, ಸದಾಶಿವ ಹಾಗೂ ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement