ಕಾನೂನು ಅರಿವು ನೆರವು ಕಾರ್ಯಕ್ರಮ
ಶೃಂಗೇರಿ: ಕಾನೂನು ಕಾಯ್ದೆಗಳು ಮನುಷ್ಯನ ರಕ್ಷಣೆಯ ಆಯುಧಗಳಿದ್ದಂತೆ. ಇವುಗಳ ಸದ್ಬಳಕೆಯಾಗಬೇಕೇ ಹೊರತೆ ದುರ್ಬಳಕೆಯಾಗಬಾರದು ಎಂದು ಶೃಂಗೇರಿ ಜೆಎಂಎಫ್ಸಿ ಹಾಗೂ ಸಿವಿಲ್ ಜಡ್ಜ್ ನ್ಯಾಯಾಲಯದ ನ್ಯಾಯಾಧೀಶ ಎಂ.ರಾಜು ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘ ಇವುಗಳ ಆಶ್ರಯದಲ್ಲಿ ಸಂಚಾರಿ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥದ ಅಂಗವಾಗಿ ಕೂತಗೋಡು ಪಂಚಾಯಿತಿ ವೈಕುಂಠಪುರ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ಕೆ. ಆರ್. ಸುರೇಶ್ ಹಾಗೂ ಶಶಿಭೂಷಣ್ ವಿಶೇಷ ಉಪನ್ಯಾಸ ನೀಡಿದರು. ಉಮೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೋಭಾ, ಸರ್ಕಾರಿ ಸಹಾಯಕ ಅಭಿಯೋಜಕಿ ವೀಣಾ, ಶೃಂಗೇರಿ ಸಬ್ ಇನ್ಸ್ಸಫೆಕ್ಟರ್ ಕುಸುಮರಾಜ್, ಸುವರ್ಣಾ ಕೃಷ್ಣ ಹೆಗ್ಡೆ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.