ಚಿಕ್ಕಕೆರೆ ಒತ್ತುವರಿ ತೆರವು
ತರೀಕೆರೆ: ಪಟ್ಟಣದ ಇತಿಹಾಸ ಪ್ರಸಿದ್ಧ ಚಿಕ್ಕಕೆರೆಯನ್ನು ಒತ್ತುವರಿ ಮಾಡಿಕೊಂಡಿರುವವರನ್ನು ಪುರಸಭೆ ಬುಧವಾರ ತೆರವುಗೊಳಿಸಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುನೀಲ್ದತ್ ಮಾತನಾಡಿ ತೆರವುಗೊಳಿಸದ ಸ್ಥಳದಲ್ಲಿದ್ದ ನಿವಾಸಿಗಳಿಗೆ ಬದಲಿ ನಿವೇಶನ ನೀಡಲು ಒಪ್ಪಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲಿ ಅವರಿಗೆ ನಿವೇಶನ ನೀಡಲಾಗುವುದು ಎಂದು ತಿಳಿಸಿದರು. ಪುರಸಭೆ ಸದಸ್ಯರಾದ ರಮೇಶ್, ಈರಣ್ಣ, ನಾಗರಾಜ್, ಸುರೇಶ್, ಸುನೀತ ಗಂಗಾಧರ್,ಯಶೋದ ಬಸವರಾಜ್, ಮುಖ್ಯಾಧಿಕಾರಿ ಬಿ.ಎನ್.ಮುನಿಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ನೀರು ಸರಬರಾಜಿನಲ್ಲಿ ವ್ಯತ್ಯಯ
ಚಿಕ್ಕಮಗಳೂರು: ನಗಸಭಾ ವತಿಯಿಂದ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜು. 17 ಹಾಗೂ 18 ರಂದು ನಗರದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.