ಭೂಸೇನಾ ನೇಮಕ ರ್ಯಾಲಿ
ಚಿಕ್ಕಮಗಳೂರು: ಭಾರತೀಯ ಭೂಸೇನೆ ವತಿಯಿಂದ ಸಿಪಾಯಿ ಕ್ಲರಿಕಲ್, ಟೆಕ್ನಿಕಲ್, ಡಿಎಸ್ಸಿ ಹುದ್ದೆಗಳ ನೇಮಕಾತಿ ಭರ್ತಿ ರ್ಯಾಲಿ ಆಗಸ್ಟ್ 5 ರಿಂದ 12 ರವರೆಗೆ ಮೂಡಬಿದರೆಯ ಆಳ್ವಾಸ್ ಎಜುಕೇಷನ್ ಪೌಂಡೇಷನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಆಸಕ್ತ ಅವಿವಾಹಿತ ಯುವಕರು ರ್ಯಾಲಿಯಲ್ಲಿ ಭಾಗವಹಿಸಬಹುದು.
ಅಭ್ಯರ್ಥಿಗಳು ರ್ಯಾಲಿಯಲ್ಲಿ ಒಂದು ದಿವಸ ಮುಂಚಿತವಾಗಿ ತಮ್ಮ ದಾಖಲೆಯನ್ನು ಮಿಲಿಟರಿ ಅಧಿಕಾರಿಗಳಿಗೆ ತೋರಿಸಿ ಟೋಕನ್ ಪಡೆಯುವಂತೆ ಸೂಚಿಸಿದೆ. ಆಸಕ್ತ ಯುವಕರು ರ್ಯಾಲಿಯ ಸದುಪಯೋಗ ಪಡೆಯುವಂತೆ ಕೋರಲಾಗಿದೆ. ಮಾಹಿತಿಗಾಗಿ ಎ.ಆರ್.ಒ., ಕೂಳೂರು ಪೋಸ್ಟ್, ಮಂಗಳೂರು ಅಥವಾ ಸೈನಿಕ ಕಲ್ಯಾಣ ಮತ್ತು ಪುನರ್ವವತಿ ಇಲಾಖೆ, ಹಾಸನ ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಕಾಫಿ ಫಲ್ಫಿಂಗ್ ಜಾಗೃತಿ
ಚಿಕ್ಕಮಗಳೂರು: ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣಾ ಮಂಡಳಿ ವತಿಯಿಂದ ಕಾಫಿ ಫಲ್ಫಿಂಗ್ನಿಂದ ಉಂಟಾಗುವ ಮಾಲಿನ್ಯ ತಡೆಗಟ್ಟುವ ಜಾಗೃತಿ ಕಾರ್ಯಕ್ರಮವನ್ನು ಜು. 19 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟೌನ್ ಮಹಿಳಾ ಸಮಾಜದ ಸವೂರ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.