ಕಾರ್ಗಿಲ್ ವಿಜಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ
ಚಿಕ್ಕಮಗಳೂರು: ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಜು. 26 ರಂದು ಕಾರ್ಗಿಲ್ ಯುವ ಪಡೆಯಿಂದ ಅಂದು ಸಂಜೆ 6.30 ಕ್ಕೆ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಗಿಲ್ ವಿಜಯೋತ್ಸವ ಸವಿನೆನಪಿಗಾಗಿ ಜು. 19 ಹಾಗೂ 20 ರಂದು ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಜು. 18ರ ಮಧ್ಯಾಹ್ನ 1 ಗಂಟೆಯೊಳಗಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕಾರ್ಗಿಲ್ ಯುವ ಪಡೆಯ ಅಧ್ಯಕ್ಷ ಸೋಮಶೇಖರ್ ಕಾರ್ಗಿಲ್ 9448244959, ಅನಿಲ್ ಆನಂದ್- 9886508080 ಇವರನ್ನು ಸಂಪರ್ಕಿಸಬಹುದು.