ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪೆಟ್ರೋಲ್ ಬಂಕ್‌ನಲ್ಲಿ ಲಕ್ಷಾಂತರ ಕಳವು

Rashmi Kasaragodu
Updated On : 18 Jul 2014, 11:14 am

ಮೂಡಿಗೆರೆ: ತಾಲೂಕಿನ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್‌ಗೆ ಕನ್ನ ಹಾಕಿದ ಕಳ್ಳರು ರು. 1.27ಲಕ್ಷ ಕಳವು ಮಾಡಿ ಪರಾರಿಯಾಗಿರುವ ಘಟನೆ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಂ.ಕೆ.ರಘು ಅವರಿಗೆ ಸೇರಿದ ಪೆಟ್ರೋಲ್ ಬಂಕ್‌ನ ಮಧ್ಯರಾತ್ರಿಯಲ್ಲಿ ರೋಲಿಂಗ್‌ಶೆಟರ್‌ನ ಬೀಗ ಮುರಿದು ಕ್ಯಾಶ್ ಬಾಕ್ಸಿನಲ್ಲಿದ್ದ ರು. 1.27 ಲಕ್ಷವನ್ನು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ಮಾಲಿಕರು ಬಣಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ವೃತ್ತ ನಿರೀಕ್ಷಕ ಎಸ್.ಎಸ್.ಹಿರೇಮಠ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬೆರಳುಮುದ್ರೆ ತಜ್ಞರು ಮಾಹಿತಿ ಕಲೆ ಹಾಕಿದರು. ರಾಜಸ್ವ ನಿರೀಕ್ಷಕಗಂಗಾಧರ್, ಉಪ ತಹಸೀಲ್ದಾರ್ ಸುರೇಂದ್ರ ಬಂಗೇರ, ಗ್ರಾಮಲೆಕ್ಕಾಧಿಕಾರಿ ಬಸವೇ ಗೌಡ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement