ಮಹಿಳಾ ಸಂಘದ ಸಭೆ
ನರಸಿಂಹರಾಜಪುರ: ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ನೂತನ ಪದಾಧಿಕಾರಿಗಳ ಪ್ರಥಮ ಸಭೆಯು ಸಂಘದ ಕಚೇರಿಯ ಆವರಣದಲ್ಲಿ ಗುರುವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷೆ ಪ್ರಶಾಂತಿ ವೆಂಕಟೇಶ್ ಮಾತನಾಡಿ, ಈ ವರ್ಷವೂ ಹಿಂದಿನ ಅಧ್ಯಕ್ಷರು ಹಾಕಿ ಕೊಟ್ಟ ಮಾರ್ಗದಲ್ಲೇ ನಡೆದು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಚೈತ್ರಾ ರಮೇಶ್, ಖಜಾಂಚಿ ಮಂಗಳಾ ಕೃಷ್ಣ, ಗೌರವಾಧ್ಯಕ್ಷೆ ವನಮಾಲಮ್ಮ, ಸಂಘದ ಸ್ಥಾಪಕ ಅಧ್ಯಕ್ಷೆ ಶ್ಯಾಮಲಾ ಸತೀಶ್ ಉಪಸ್ಥಿತರಿದ್ದರು.