ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪತ್ರಕರ್ತರಿಗೆ ಪ್ರಚಲಿತ ವಿದ್ಯಮಾನದ ಅರಿವು ಅವಶ್ಯ: ಸುಧೀರ್‌ಕುಮಾರ್

Rashmi Kasaragodu
Updated On : 19 Jul 2014, 11:33 am

ಕೊಪ್ಪ: ಮುದ್ರಣ ಮಾಧ್ಯಮ ನಿಖರ ಮತ್ತು ಸವಿಸ್ತಾರ ಸುದ್ದಿ ಸಮಾಜಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಕೀಲ ಹಾಗೂ ಸಮಾಜ ಪರ ಹೋರಾಟಗಾರ ಸುಧೀರ್ ಕುಮಾರ್ ಮೊರೋಳ್ಳಿ ತಿಳಿಸಿದರು.
ತಾಲೂಕಿನ ಬಸ್ರೀಕಟ್ಟೆ ಸದ್ಗುರು ಪ್ರೌಢಶಾಲೆ ಆವರಣದಲ್ಲಿ ತಾಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಂಕು ಡೊಂಕುಗಳನ್ನು ತಿದ್ದಿ ಹೇಳುವ ಮೂಲಕ ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ತಂತ್ರಜ್ಞಾನ ಮುಂದುವರೆದು ದೃಶ್ಯ ಮಾಧ್ಯಮ ಹೆಚ್ಚಾಗಿದ್ದರೂ ಪತ್ರಿಕಾ ಮಾಧ್ಯಮ ತನ್ನದೇ ಆದ ರೀತಿಯಲ್ಲಿ ಸಮಾಜದ ಸಾಧಕ ಬಾಧಕ ವಿರ್ಮಶಿಸಿ ಜನರಿಗೆ ಬೇಕಾದ ಉಪಯುಕ್ತ ಮಾಹಿತಿ ನೀಡುವಲ್ಲಿ ತನ್ನದೇ ಅದ ಛಾಪು ಮೂಡಿಸಿದೆ. ಪತ್ರಿಕೆಯಲ್ಲಿ ಬಂದಂತಹ ಉಪಯುಕ್ತ ಮಾಹಿತಿಗಳನ್ನು ದಾಖಲೆಗಳಾಗಿ ಇಡಲು ಸಹಕಾರಿಯಾಗಿರುವುದರಿಂದ ಜನರು ಹೆಚ್ಚಾಗಿ ಪತ್ರಿಕೆಯನ್ನು ಅವಲಂಬಿಸುತ್ತಿರುವುದು ಗಮನಾರ್ಹ ಎಂದರು.
ಪತ್ರಕರ್ತನಾಗಲು ವಿಶೇಷವಾದ ವಿದ್ಯಾರ್ಹತೆಯ ಅವಶ್ಯಕತೆವಿಲ್ಲ ಎಂಬುದು ನನ್ನ ಭಾವನೆ. ಆದರೆ ಸಮಾಜದ ಎಲ್ಲಾ ಕ್ಷೇತ್ರದ ಬಗ್ಗೆ ತಿಳಿವಳಿಕೆ ಮತ್ತು ವಿದ್ಯಾಮಾನದ ಅರಿವು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದರೆ, ಪತ್ರಕರ್ತನಾಗಲು ಮೊದಲ ಹಂತದ ಅರ್ಹತೆ ಪಡೆದುಕೊಂಡಂತೆ. ಮಹಾತ್ಮ ಗಾಂಧಿ ಹೆಸರಾಂತ ಪತ್ರಕರ್ತರಾಗಿದ್ದರು. ಇಂದಿನ ಪತ್ರಕರ್ತರು ಗಾಂಧಿಯನ್ನು ಆದರ್ಶವಾಗಿಟ್ಟು ಕೊಂಡು ಕೆಲಸ ಮಾಡಿದಲ್ಲಿ ಯಶಸ್ವಿ ಪತ್ರಕರ್ತನಾಗಲು ಸಾಧ್ಯ ಎಂದರು.
ಸದ್ಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯ ಮಟ್ಟದ ಪತ್ರಿಕೆಗಳು ಸ್ಥಳೀಯ ಆವೃತ್ತಿ ಪ್ರಕಟ ಮಾಡುತ್ತಿರುವುದರಿಂದ ಜಿಲ್ಲಾ ಪತ್ರಿಕೆಗಳು ನೆಲಕಚ್ಚಿದ್ದರೂ ಸ್ಥಳೀಯ ಪತ್ರಿಕೆಗಳು ತಮ್ಮದೇ ಅದ ಶೈಲಿಯಲ್ಲಿ ನೈಜ ಸುದ್ದಿಯನ್ನು ಪ್ರಕಟಿಸುವ ಮೂಲಕ ಜನಮೆಚ್ಚುಗೆ ಗಳಿಸುತ್ತಿವೆ ಎಂದರು.
ಪತ್ರಕರ್ತ ಬಸ್ರೀಕಟ್ಟೆ ಗೋಪಾಲರನ್ನು ಜಿಪಂ ಅಧ್ಯಕ್ಷ ಕುಕ್ಕಡಿ ರವೀಂದ್ರ ಸನ್ಮಾನಿಸಿದರು. ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಎಚ್.ಆರ್.ಸಂಜೀವ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಗುಡ್ಡೇತೋಟ ನಟರಾಜ್, ಕಾಂಗ್ರೆಸ್ ಮುಖಂಡ ಡಿ.ಎಸ್.ಸತೀಶ್, ಸಹಕಾರ ಸಾರಿಗೆ ಅಧ್ಯಕ್ಷ ಇ.ಎಸ್.ಧರ್ಮಪ್ಪ, ಪ್ರೌಢಶಾಲೆ ಉಪಪ್ರಾಂಶುಪಾಲ ಗಣೇಶ್ ಪ್ರಸಾದ್, ಮುಖ್ಯೋಪಾಧ್ಯಾಯಿನಿ ಕೀರ್ತನಾಂದಸ್ವಾಮಿ, ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement