ಯಶಸ್ವಿನಿ: ನೋಂದಣಿ ಅವಧಿ ವಿಸ್ತರಣೆ
ನರಸಿಂಹರಾಜಪುರ: ಯಶಸ್ವಿನಿ ಯೋಜನೆಯಡಿ ಸದಸ್ಯರು ತಮ್ಮ ಹೆಸರನ್ನು ನೋಂದಾಯಿಸಲು ಆ.16ರವರೆಗೆ ಅವಧಿ ವಿಸ್ತರಿಸಲಾಗಿದೆ. ಸದಸ್ಯರು ತಮ್ಮ ಯಶಸ್ವಿನಿ ಕಾರ್ಡನ್ನು ನೋಂದಾಯಿಸಿ ಕೊಳ್ಳಬಹುದು. ಹೊಸದಾಗಿ ಯಶಸ್ವಿನಿ ಕಾರ್ಡನ್ನು ಸಹ ಮಾಡಿಸಿಕೊಳ್ಳಬಹುದು. ಕಳೆದ ವರ್ಷ 75 ವರ್ಷದ ಮೇಲ್ಪಟ್ಟವರಿಗೆ ಯಶಸ್ವಿನಿ ಕಾರ್ಡು ಮಾಡಿಸಿಕೊಳ್ಳಲು ಅವಕಾಶ ಇರಲಿಲ್ಲ. ಈಗ ಜೀವಿತದ ಅವಧಿಯವರೆಗೂ ಕಾರ್ಡ್ ಮಾಡಿಸಿಕೊಳ್ಳಬಹುದು ಎಂದು ನರಸಿಂಹರಾಜಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ನಾರಾಯಣ್ ತಿಳಿಸಿದ್ದಾರೆ.