ರೋಟರಿ ಇನ್ನರ್ವೀಲ್ ಪದಗ್ರಹಣ ನಾಳೆ
ಶೃಂಗೇರಿ: ಪಟ್ಟಣದ ರೈತ ಭವನದಲ್ಲಿ ರೋಟರಿ ಹಾಗೂ ಇನ್ನರ್ವೀಲ್ ಕ್ಲಬ್ 2014-15 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 20 ಭಾನುವಾರ ಏರ್ಪಡಿಸಿದೆ. ರೋಟರಿ ನೂತನ ಅಧ್ಯಕ್ಷರಾಗಿ ಬಿ.ಜಿ.ಕಾಡಪ್ಪಗೌಡ ಹಾಗೂ ಇನ್ನರ್ವೀಲ್ ನೂತನ ಅಧ್ಯಕ್ಷೆಯಾಗಿ ಶೋಭಾ ಸಂಪತ್ ಅಧಿಕಾರ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುನಿತಾ ಶ್ರೀಧರ್, ಡಿ.ಎಸ್.ರವಿ, ಎಂ.ಬಿ.ರಮೇಶ್, ಪ್ರೇಮ ಶೆಟ್ಟಿ, ಡಿ.ಮಹೇಶ್, ಎಚ್.ಎಸ್.ಗಣೇಶ್, ಪೂರ್ಣಿಮಾ ಸಿದ್ದಪ್ಪ ಪಾಲ್ಗೊಳ್ಳಲಿದ್ದಾರೆ.