ಸುಗಮ ಸಂಗೀತ ಎಲ್ಲೆಡೆ ಪಸರಿಸಲಿ: ಡಾ.ಪರಶಿವಮೂರ್ತಿ
ಶಿವಮೊಗ್ಗ: ನಾಡಿನಾದ್ಯಂತ ಸುಗಮ ಸಂಗೀತಕ್ಕೆ ಶ್ರೋತೃಗಳು ಹೆಚ್ಚಾಗಬೇಕು. ಎಲ್ಲೆಡೆ ಸುಗಮ ಸಂಗೀತ ಪಸರಿಸಬೇಕೆಂದು ಪೂರ್ವವಲಯ ಐಜಿಪಿ ಡಾ.ಎಸ್.ಪರಶಿವಮೂರ್ತಿ ಹೇಳಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ ರವೀಂದ್ರ ನಗರ ಪ್ರಸನ್ನ ಗಣಪತಿ ದೇವಾಲಯದಲ್ಲಿ ಆಯೋಜಿಸಿರುವ ಗೀತ ಗಾಯನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರತಿಭೆ ಬೆಳೆಸಲು ಶ್ರೋತೃವರ್ಗ ಮುಖ್ಯ ಎಂದರು. ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದು ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಗರ್ತಿಕೆರೆ ರಾಘಣ್ಣ, ಪರಿಷತ್ ಖಜಾಂಚಿ ಶ್ರೀನಿವಾಸ ಉಡುಪ, ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯಂಜಯ ದೊಡ್ಡವಾಡ, ಸಾಲಿಗ್ರಾಮ ಗಣೇಶ್ ಶಣೈ, ಶಾಂತಾಶೆಟ್ಟಿ, ಅಚಲರಾವ್, ಪುಷ್ಪಾ ಸತೀಶ್, ಜಯಶೀಲನ್ ಪಾಲ್ಗೊಂಡಿದ್ದರು.