ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸೇವೆ ನೆಮ್ಮದಿ ತರಲಿ: ಹರಿಪ್ರಸಾದ್

Rashmi Kasaragodu
Updated On : 19 Jul 2014, 11:33 am

ಬ್ಯಾಗ್, ನೋಟ್‌ಬುಕ್ ವಿತರಿಸಿ ಬಿಇಒ ಹರಿಪ್ರಸಾದ್


ತರೀಕೆರೆ:  ಸೇವೆ ಮನುಷ್ಯನಿಗೆ ಸಂತೋಷ ಮತ್ತು ನೆಮ್ಮದಿ ತರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್ ತಿಳಿಸಿದ್ದಾರೆ.
ಅವರು, ಆಪತ್ ಸಹಾಯ ಫೌಂಡೇಶನ್ ಬೆಂಗಳೂರು ವತಿಯಿಂದ ಪಟ್ಟಣದ ನಾಗಪ್ಪ ಕಾಲೋನಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ನೋಟ್ ಬುಕ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಕಾರ್ಯ: ಗಳಿಕೆಯ ಕೆಲವು ಭಾಗ ಸಮಾಜಕ್ಕೆ ಅರ್ಪಿತವಾಗಬೇಕು. ಮನುಷ್ಯ ಸದಾಕಾಲ ಒಳ್ಳೆಯ ಆಶಯ ಹೊಂದಿದ್ದರೆ, ಉತ್ತಮ ಕಾರ್ಯ ಸಾಧನೆ ಸಾಧ್ಯ, ಇದಕ್ಕೆ ಸಂಖ್ಯೆ ಮುಖ್ಯವಲ್ಲ, ಖಾಸಗಿ ಶಾಲೆಯಲ್ಲಿ ಕೊಡಮಾಡುವ ಎಲ್ಲಾ ಸೌಲಭ್ಯವನ್ನು ಸರ್ಕಾರಿ ಶಾಲೆಯಲ್ಲೂ ಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಪತ್ ಸಹಾಯ ಫೌಂಡೇಶನ್‌ನ ವಿಶ್ವನಾಥ್ ಮಾತನಾಡಿ, ಜೀವನದಲ್ಲಿ ತಂದೆ ತಾಯಿ ಗುರು ಹಿರಿಯರು ಸತ್ಯ ಧರ್ಮ ಈ 6 ಪ್ರಮಖ ವಿಚಾರಗಳ ಬಗ್ಗೆ ಅರಿತು ಅದರಂತೆ ನಡೆದಲ್ಲಿ ಬದುಕು ಸಾರ್ಥಕತೆ ಪಡೆಯಲಿದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ್ ಮಾತನಾಡಿದರು. ಶಾಲಾ ಅಭಿವೃದ್ದಿ ಸಮಿತಿ ಗಂಗಾಧರ್ ಮಾತನಾಡಿ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದ್ದು, ತಮ್ಮ ಕಾರ್ಯ ವ್ಯಾಪ್ತಿ ಹೆಚ್ಚಿಸುವ ಮೂಲಕ ಹೆಚ್ಚು ಹೆಚ್ಚು ಬಡ ವಿದ್ಯಾರ್ಥಿಗಳನ್ನು ತಲುಪುವಂತಾಗಲಿ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಜಯ್ಯಣ್ಣ, ಗೌರಮ್ಮ, ಶಾಲೆ ಮುಖ್ಯೋಪಾಧ್ಯಾಯಿನಿ ಕಾಮಾಕ್ಷಮ್ಮ, ಶಿಕ್ಷಕಿ ವಿಜಯ, ಫೌಂಡೇಶನ್ನಿನ ರಾಜೇಶ್, ವೆಂಕಟಸುಬ್ರಹ್ಮಣ್ಯ, ಶಾಲಾ ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೆಚ್ಚು ಹಾಜರಿ ಪಡೆದ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಕೊಡುವ ಪ್ರೋತ್ಸಾಹ ಧನ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement