ಇಂದಿನಿಂದ ಗುಡ್ಡೇಕಲ್ ಜಾತ್ರೆ
ಶಿವಮೊಗ್ಗ: ಗುಡ್ಡೇಕಲ್ಶ್ರೀಬಾಲಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಜು.20 ಮತ್ತು 21ರಂದು ನಡೆಯಲಿದೆ. ಭಾನುವಾರ ಭರಣಿ ಹಾಗೂ ಸೋಮವಾರ ಆಡಿಕೃತ್ತಿಕೆ ಜಾತ್ರೆ ನಡೆಯಲಿದ್ದು, ಈ ಸಂಬಂಧ ಪೂರ್ವ ಸಿದ್ಧತೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಸುಬ್ರಮಣಿ ಕೋರಿದ್ದಾರೆ.
ಶರಣ ಸಂಗಮ ಕಾರ್ಯಕ್ರಮ
ಶಿವಮೊಗ್ಗ: ಬಸವಕೇಂದ್ರದ 187ನೇ ಶರಣ ಸಂಗಮ ಕಾರ್ಯಕ್ರಮ ಜು.20 ರಂದು ಸಂಜೆ 6.30ಕ್ಕೆ ಬಸವಕೇಂದ್ರದಲ್ಲಿ ಹಮ್ಮಿಕೊಂಡಿದೆ. ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸುವರು. ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಮುಖ್ಯ ಅತಿಥಿ. ಕೆ.ಸಿದ್ದಪ್ಪ ಉಪನ್ಯಾಸ ನೀಡುವರು.