ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಾಲೂಕಿನಲ್ಲಿ ಮುಂದುವರಿದ ವರುಣನ ಆರ್ಭಟ

Rashmi Kasaragodu
Updated On : 20 Jul 2014, 1:11 am

ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಶನಿವಾರವೂ ವರುಣನ ಆರ್ಭಟ ಮುಂದುವರೆಯಿತು. ಶುಕ್ರವಾರ ಸುರಿದ ಭಾರೀ ಮಳೆಯಿಂದ ರಾತ್ರಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿತ್ತು. ಶನಿವಾರ ಬೆಳಿಗ್ಗೆವರೆಗೂ ಪ್ರವಾಹವಿತ್ತು.
   ಗಾಳಿಯ ಆರ್ಭಟಕ್ಕೆ ಮರಗಳು ಧರೆಗುರುಳುತ್ತಿದ್ದು ಹಾನಿ ಸಂಭವಿಸುತ್ತಿದೆ. ವಿದ್ಯುತ್ ಕಂಬಗಳು, ತಂತಿಗಳು ತುಂಡಾಗುತ್ತಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ಥ್ಥಗೊಳ್ಳುತ್ತಿದೆ. ಶನಿವಾರ ಸಂಜೆಯವರೆಗೂ ಮಳೆಯ ಆರ್ಭಟ ಮುಂದುವರೆದಿತ್ತು. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹದ ಭೀತಿ ಉಂಟಾಗಿದೆ. ಕೊಪ್ಪ- 88, ಹರಿಹರಪುರ- 94.3, ಜಯಪುರ- 102.3, ಕಮ್ಮರಡಿ- 40.3, ಬಸರೀಕಟ್ಟೆ- 72.3, ಮೂಡಿಗೆರೆ- 57.9, ರಂಗೇನಹಳ್ಳಿಯಲ್ಲಿ 27 ಮಿ.ಮೀ. ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement