ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರತಿನಿಧಿ ಶುಲ್ಕ ಕೊಡಲು ಕಷ್ಟವಾದ್ರೆ ಕನ್ನಡಾಭಿಮಾನಿಗಳಾಗಿ ಭಾಗವಹಿಸಲಿ: ದತ್ತ

Rashmi Kasaragodu
Updated On : 20 Jul 2014, 1:14 am

ಕಡೂರು: ಶಿಕ್ಷಕರು ಕನ್ನಡಾಭಿಮಾನಿಗಳಲ್ಲವೇ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಿಕ್ಷಕರು ಪ್ರತಿನಿಧಿ ಶುಲ್ಕ ನೀಡುವುದು ಕಷ್ಟವಾಗುತ್ತದೆ ಎಂಬುದಾದರೆ ಶುಲ್ಕ ನೀಡುವುದು ಬೇಡ, ಕನ್ನಡಾಭಿಮಾನಿಗಳಾಗಿ ಮಾತ್ರ ಸಮ್ಮೇಳನದಲ್ಲಿ ಭಾಗವಹಿಸಲಿ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಜು.25, 26 ರಂದು ಬೀರೂರಿನಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಕುರಿತು ತಾಪಂ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಜಿಲ್ಲಾ ಸಮ್ಮೇಳನದ ಪ್ರತಿನಿಧಿ ಶುಲ್ಕ ಸೇರಿದಂತೆ ವಿವಿಧ ಇಲಾಖೆಗಳಿಂದ ನೀಡುವ ದೇಣಿಗೆ ಕುರಿತು ಪ್ರತೀ ಇಲಾಖಾವಾರು ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಶಾಸಕರು ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್‌ಗೆ ದೂರವಾಣಿ ಮೂಲಕ ಕಸಾಪದಿಂದ ನೀಡಿದ್ದ ರಸೀತಿ ಪುಸ್ತಕದ ದೇಣಿಗೆ ಕೇಳಿದಾಗ ಶಿಕ್ಷಣಾಧಿಕಾರಿಗಳು ಶಿಕ್ಷಕರು ದೇಣಿಗೆ ನೀಡಲು ಕಷ್ಟವಾಗುತ್ತದೆ ಎಂದರು. ಇದರಿಂದ ಅಸಮಾಧಾನಗೊಂಡ ದತ್ತರವರು ಪ್ರತಿನಿಧಿ ಶುಲ್ಕ ನನಗೆ ಕೇಳುತ್ತಿಲ್ಲ. ನನಗೆ ಲಂಚ ಕೊಡುವಂತೆಯೂ ಶಿಕ್ಷಕರಿಗೆ ಕೇಳುತ್ತಿಲ್ಲ. ಶಿಕ್ಷಕರು ಕನ್ನಡಾಭಿಮಾನಿಗಳಲ್ಲವೇ, ರು. 200 ನೀಡುವುದು ಶಿಕ್ಷಕರಿಗೆ ಕಷ್ಟವಾದರೆ ಕಡೂರು, ಬೀರೂರು ವಲಯ ಶಿಕ್ಷಕರು ಸಮ್ಮೇಳನದ ಪ್ರತಿನಿಧಿ ಶುಲ್ಕ ನೀಡುವುದು ಬೇಡ ಎಂದರು.
ಇನ್ನು ವಿವಿಧ ಇಲಾಖೆಗಳ ವಿವರ ಪಡೆದ ಅವರು ಸಮ್ಮೇಳನಕ್ಕೆ ವಿವಿಧ ವಿಭಾಗಗಳ ಖರ್ಚು ಸೇರಿ ಸುಮಾರು ರು. 10 ಲಕ್ಷ ಖರ್ಚು ಬರುತ್ತದೆ ಎಂದು ಸಭೆಗೆ ಸೂರಿ ಶ್ರೀನಿವಾಸ್ ವಿವರಿಸಿದರು. ಕಸಾಪ ಕೇಂದ್ರ ಸಮಿತಿಯಿಂದ ರು. 4.50 ಲಕ್ಷ, ಜಿಲ್ಲೆಯ ಗ್ರಾಪಂಗಳಿಂದ ರು. 3 ಲಕ್ಷ ಹಾಗೂ ಇಲಾಖೆಗಳು ಇತರೆಯಿಂದ ಲಕ್ಷ ಸೇರಿದಂತೆ ಸುಮಾರು ರು. 9.70 ಲಕ್ಷ ಸಂಗ್ರಹವಾಗಲಿದೆ ಎಂದು ಮಾಹಿತಿ ನೀಡಿದರು. ಆಗ ಶಾಸಕ ದತ್ತ ಸುಮಾರು ರು. 10 ಲಕ್ಷ ಖರ್ಚಾಗಲಿದೆ. ಇದಕ್ಕೆ ವ್ಯತ್ಯಾಸವಾದಲ್ಲಿ ತಾವು ಭರಿಸುವುದಾಗಿ ಹೇಳಿದರು.
ತಹಸೀಲ್ದಾರ್ ಚಿನ್ನರಾಜು, ಜೆಡಿಎಸ್ ನಗರ ಘಟಕ ಕಾರ್ಯಾಧ್ಯಕ್ಷ, ಕಸಾಪ ಪದಾಧಿಕಾರಿ ಭಂಡಾರಿ ಶ್ರೀನಿವಾಸ್, ಮುಖಂಡ ಸೀಗೇಹಡ್ಲು ಹರೀಶ್, ಎಚ್.ಸಿ.ರೇವಣಸಿದ್ದಪ್ಪ, ಬಿ.ಜೆ.ಆನಂದಮೂರ್ತಿ, ವಿರೂಪಾಕ್ಷಪ್ಪ, ವೈ.ಎಸ್.ರವಿಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement