ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೀಟೆ ತುಂಡು ತುಂಬಿದ್ದ ಪಿಕಪ್ ವಾಹನ ವಶ

Rashmi Kasaragodu
Updated On : 20 Jul 2014, 1:08 am

ನರಸಿಂಹರಾಜಪುರ: ರು. 1.25 ಲಕ್ಷ ಮೌಲ್ಯದ ಬೀಟೆ ತುಂಡುಗಳನ್ನು ತುಂಬಿದ್ದ ಪಿಕಪ್ ವಾಹನ ಸೀತೂರು ಗ್ರಾಪಂ ವ್ಯಾಪ್ತಿಯ ದೇವಾಲೆ ಕುಣಜದ ಸಮೀಪ ಉರುಳಿ ಬಿದ್ದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಶನಿವಾರ ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸೀತೂರು ಶಾಖೆ ಉಪ ವಲಯ ಅರಣ್ಯಾಧಿಕಾರಿ ವರುಣಶೆಟ್ಟಿ ಮ್ತತು ಸಿಬ್ಬಂದಿ ಕಾಯುತ್ತಿದ್ದಾಗ ಪಿಕಪ್ ವಾಹನ ಆಗಮಿದಾಗ ತಕ್ಷಣ ಅದನ್ನು ಬೆನ್ನಟ್ಟಲಾಗಿದೆ. ಸೀತೂರು ಗ್ರಾಪಂ ವ್ಯಾಪ್ತಿಯ ದೇವಾಲೆ ಕುಣಜ ಸೇತುವೆ ಸಮೀಪದಲ್ಲಿ ಪಿಕಪ್ ವಾಹನ ಚರಂಡಿಗೆ ಉರುಳಿ ಬಿದ್ದಿದೆ. ಚಾಲಕ ತಕ್ಷಣ ಪರಾರಿಯಾಗಿದ್ದಾನೆ. ತವಾಹನದಲ್ಲಿದ್ದ ದಾಖಲೆ ಪ್ರಕಾರ ಆರೋಪಿಭದ್ರಾವತಿ ದಡಮಘಟ್ಟದ ಇದ್ರೀಸ್ ಎಂದು ಗುರುತಿಸಲಾಗಿದೆ. ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಕೇಶವಮೂರ್ತಿ ಮಾರ್ಗದರ್ಶನದಲ್ಲಿ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement