ಮಲೇರಿಯಾ ಮಾಸಾಚರಣೆ
ಶಿರಾಳಕೊಪ್ಪ: ಪ್ರಾಥಮಿಕ ಆರೋಗ್ಯ ಕೇಂದ್ರ ಸುಣ್ಣದಕೊಪ್ಪ ಆಶ್ರಯದಲ್ಲಿ ಐತಿಹಾಸಿಕ ಕ್ಷೇತ್ರ ಶಿವನಪಾದ ಮತ್ತು ಇತರ ಗ್ರಾಮಗಳಲ್ಲಿ ಮಲೇರಿಯಾ ಮಾಸಾಚರಣೆ ಹಾಗೂ ಸಾಂಕ್ರಾಮಿಕ ರೋಗಗಳ ಹತೋಟಿ ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು.
ಶಿವನಪಾದ ಗ್ರಾಮದ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಹಿರಿಯ ಸಹಾಯಕ ಸುಬ್ರಮಣ್ಯ ಮಾತನಾಡಿದರು. ಸುಣ್ಣದಕೊಪ್ಪ ಆರೋಗ್ಯ ಸಹಾಯಕ ವಿನಯಕುಮಾರ್ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಮಲೇರಿಯಾಧಿಕಾರಿ ಗಣೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆ ಮುಖ್ಯ ಶಿಕ್ಷಕ ಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಸ್ವಾಗತಿಸಿದರು.ವಿನಯಕುಮಾರ್ ವಂದಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಹತ್ತಿರದ ಬಿದರಕೊಪ್ಪ ಗ್ರಾಮದಲ್ಲಿ ಲಾರ್ವಾ ಸಮೀಕ್ಷೆ ನಡೆಯಿತು.