ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಿವಮೊಗ್ಗ ತಾಪಂಬಿಜೆಪಿಗೆ ಮುಖಭಂಗ

Rashmi Kasaragodu
Updated On : 20 Jul 2014, 1:14 am

ಶಿವಮೊಗ್ಗ: ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರ ಕಳೆದುಕೊಂಡ ಒಂದೇ ದಿನದಲ್ಲಿ ಬಿಜೆಪಿ ಶಿವಮೊಗ್ಗ ತಾಲೂಕು ಪಂಚಾಯ್ತಿಯಲ್ಲಿಯೂ ಮುಖಭಂಗ ಅನುಭವಿಸಿದೆ. ಹಿಂದಿನ ಅವಧಿಯಲ್ಲಿ ಅಧಿಕಾರ ಅನುಭವಿಸಿದ್ದ ಬಿಜೆಪಿಗೆ ಕೊನೆ ಗಳಿಗೆಯಲ್ಲಿ ಬಿಜೆಪಿಯ ಒಬ್ಬ ಸದಸ್ಯೆ ಬಂಡಾಯವೆದ್ದು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬೆಂಬಲಿಸಿದ್ದಾರೆ. ಜೆಡಿಎಸ್ ಪಕ್ಷವೂ ಮೈತ್ರಿ ಕಡಿದುಕೊಂಡಿದೆ.
ಅತಂತ್ರ ತಾಲೂಕು ಪಂಚಾಯ್ತಿ 18 ಸದಸ್ಯರಲ್ಲಿ ಬಿಜೆಪಿ 8, ಜೆಡಿಎಸ್ 6 ಹಾಗೂ ಕಾಂಗ್ರೆಸ್ 4 ಸದಸ್ಯರ ಬಲ ಹೊಂದಿದೆ. ಶನಿವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಮಂಜುಳಾ ಲಿಂಗರಾಜು ಹಾಗೂ ಬಿಜೆಪಿಯ ಗಾಯತ್ರಿ ರಾಮಚಂದ್ರಪ್ಪ ನಾಮಪತ್ರ ಸಲ್ಲಿಸಿದ್ದರು. ಆಯ್ಕೆ ಸಂದರ್ಭದಲ್ಲಿ ಮಂಜುಳಾ ಅವರ ಪರ ಜೆಡಿಎಸ್ ಪಕ್ಷದ ಐದು ಹಾಗೂ ಕಾಂಗ್ರೆಸ್ ಪಕ್ಷದ ನಾಲ್ವರು ಕೈ ಎತ್ತಿದರು. ಬಿಜೆಪಿಯ ಗಾಯತ್ರಿ ಅವರಿಗೆ ಏಳು ಸದಸ್ಯರು ಬೆಂಬಲಿಸಿದರು. ಹಾಗಾಗಿ ಮಂಜುಳಾ ಆಯ್ಕೆಯಾದರು. ಇನ್ನು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಏಕೈಕ ಬಿಜೆಪಿ ಸದಸ್ಯೆ ದೇವಿಭಾಯಿ ಧರ್ಮಾನಾಯ್ಕ್ ಅವರು ಅವಿರೋಧವಾಗಿ ಆಯ್ಕೆಯಾದರು. ಉಪ ವಿಭಾಗಾಧಿಕಾರಿ ಕುಸುಮಾ ಕುಮಾರಿ ಅವರು ಚುನಾವಣಾಧಿಕಾರಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement