ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಮೆಚೂರ್ ರೇಡಿಯೋ ಜಗತ್ತಿನ ಸಂಪರ್ಕ ಸೇತು

Mainashree
Updated On : 21 Jul 2014, 10:20 am

ಚಿಕ್ಕಮಗಳೂರು:  ಅಮೆಚೂರ್ ರೇಡಿಯೋ ಬಳಕೆದಾರರಾಗುವ ಮೂಲಕ ಇಡೀ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವಂತೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯಾಮ್ಸ್ ಸಂಸ್ಥೆಯ ನಿರ್ದೇಶಕ ಎಸ್. ಸತ್ಯಪಾಲ್ ಹೇಳಿದರು.ನಗರದ ಚಿಕ್ಕಮಗಳೂರು ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆದ ಅಮೆಚೂರ್ ರೇಡಿಯೋ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ರೇಡಿಯೋಗಳು ಪ್ರಪಂಚದಾದ್ಯಂತ ಇಂದು ಬಳಕೆಯಾಗುತ್ತಿವೆ, ಭೂಕಂಪ, ಪ್ರವಾಹ, ಸೇರಿದಂತೆ ಇನಿತರ ಆವಘಡಗಳ ವೇಳೆ ಮತ್ತು ಮೋಟಾರ್ ಟ್ರಾಲಿಗಳಲ್ಲಿ ಸಂಪರ್ಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ತಿಳಿವಳಿಕೆಯ ಕೊರತೆಯಿಂದಾಗಿ ಕರ್ನಾಟಕದಲ್ಲಿ ಬಳಕೆದಾರರ ಸಂಖ್ಯೆ ಕಮ್ಮಿ ಇದೆ ಎಂದರು. ಮಲೆನಾಡು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸರಿಯಾಗಿ ದೊರೆಯದ ಕಾರಣ ಅಮೆಚೂರ್ ರೇಡಿಯೋ ಬಳಕೆ ಅತ್ಯಂತ ಅವಶ್ಯಕ ಎಂದು ತಿಳಿಸಿದರು..ಚಿಕ್ಕಮಗಳೂರು ಅಮೆಚೂರ್ ಸೊಸೈಟಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಆರ್. ಚೇತನ್, ತಮ್ಮ ಇಲಾಖೆ ವತಿಯಿಂದ ನೂತನ ಸಂಸ್ಥೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಸೊಸೈಟಿಯ ಅಧ್ಯಕ್ಷ ಬಿ.ಎಂ. ಪದ್ಮನಾಭ್ ಅಧ್ಯಕ್ಷತೆ ವಹಿಸಿದ್ದರು, ಸಂಚಾಲಕರಾದ ಸಿದ್ದಾರ್ಥ್ ಮೋಹನ್, ಜೋಹರ್ ಅಜಾದ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಫಾರೂಕ್ ಅಹಮದ್ ಉಪಸ್ಥಿತರಿದ್ದರು. ಅನಿಲ್ ಸವೂರ್ ಸ್ವಾಗತಿಸಿದರು. ಕಿಶನ್ ಗೌಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement