ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಳೆಯಿಂದ ರಕ್ಷಣೆಗೆ ಪ್ರಯಾಣಿಕರ ಪರದಾಟ

Rashmi Kasaragodu
Updated On : 22 Jul 2014, 11:11 am

ಮೂಡಿಗೆರೆ:  ತಾಲೂಕಿನಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು. ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿ ಕೆರೆಗಳು ತುಂಬಿ ಹರಿಯುತ್ತಿದ್ದು, ಮರಗಳು ಧರೆಗುರುಳಿ, ಸಂಚಾರ ವ್ಯಥ್ಯಯಗೊಂಡಿವೆ. ಶಾಲಾ ಕಾಲೇಜುಗಳಿಗೆ ರಜೆ ಘೋಸಿಸಲಾಗಿದೆ.
ಮಳೆಯಿಂದ ರಕ್ಷಿಸಿಕೊಳ್ಳಲು ದೂರದ ಊರಿಂದ ಬರುವ ಪ್ರಯಾಣಿಕರ ಗೋಳು ಆಲಿಸುವವರೆ ಇಲ್ಲದಂತಾಗಿದೆ. ಕಳೆದ 2 ವರ್ಷಗಳಿಂದ ಮೂಡಿಗೆರೆ ಬಸ್ ನಿಲ್ದಾಣದ ಕಾಮಗಾರಿ ಆಮೆಗತಿಯಲ್ಲಿ ಸಾಗಿ ಈಗ ಕಾಮಗಾರಿ ಸ್ಥಗಿತಗೊಂಡಿದೆ.
ಈ ಹಿನ್ನಲೆಯಲ್ಲಿ ಪ್ರಯಾಣಿಕರು ಕೊಚ್ಚೆಯಲ್ಲೆ ಕೂರುವಂತಾಗಿದೆ. ವಿದ್ಯಾರ್ಥಿಗಳು ಗಾಳಿ ಮಳೆಯನ್ನು ಲೆಕ್ಕಿಸದೆ ಕೊಡೆ ಹಿಡಿದು ರಸ್ತೆಯಲ್ಲಿ ಬಸ್ಸಿಗಾಗಿ ಕಾಯುವ ಪರಿಸ್ಥಿತಿಯಿದೆ.  ತಾಲೂಕಿನ ಕಳಸ ಹೊರನಾಡು ರಸ್ತೆಯಲ್ಲಿ ಭದ್ರಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕಳಸ-ಹೊರನಾಡು ಸಂಚಾರ ಸ್ಥಗಿತಗೊಂಡಿದೆ.
ನರಸಿಂಹರಾಜಪುರತಾಲೂಕಲ್ಲೂ ವರ್ಷಧಾರೆ
ನರಸಿಂಹರಾಜಪುರ: ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಹಳ್ಳಗಳು ಉಕ್ಕಿ ರಸ್ತೆ, ಬತ್ತದ ಗದ್ದೆಯ ಮೇಲೆ ಹರಿಯುತ್ತಿದೆ. ಭಾನುವಾರ ರಾತ್ರಿ ಗುಡುಗು ಸಹಿತ ಸುರಿದ ಜೋರು ಮಳೆಯ ಪರಿಣಾಮವಾಗಿ ಸೋಮವಾರ ಬೆಳಗ್ಗೆ ಕುದುರೆಗುಂಡಿ-ಕಾನೂರು ರಸ್ತೆಯಲ್ಲಿ ಬರುವ ಹಳ್ಳದ ಮೇಲೆಲ್ಲ ನೀರು ನಿಂತು ಕೆಲ ಸಮಯ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಈ ಭಾಗದಲ್ಲಿ ಬರುವ ಬಸ್ಸುಗಳು ಸೋಮವಾರ ಬೆಳಿಗ್ಗೆ ಗುಡ್ಡೇಹಳ್ಳ ಮಾರ್ಗವಾಗಿ ಸಂಚರಿಸಿದವು. ಗುಡ್ಡೇಹಳ್ಳದ ಸಮೀಪದ ಬತ್ತದ ಗದ್ದೆಯ ಮೇಲೆ ಹಳ್ಳ ಹರಿಯುತ್ತಿತ್ತು. ಮುತ್ತಿನಕೊಪ್ಪದಲ್ಲಿ ಭದ್ರಾ ನದಿಯು ಉಕ್ಕೇರಿ ನೂರಾರು ಎಕರೆ ಬತ್ತದ ಗದ್ದೆಯ ಮೇಲೆ ಹರಿಯುತ್ತಿದೆ. ಸೋಮವಾರ ನಾಟೀ ಮಾಡಲು ಹೋದ ಕಾರ್ಮಿಕರು ವಾಪಾಸು ಬರಬೇಕಾಯಿತು.
504 ಮಿ.ಮೀ.ಮಳೆ: ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆಯವರೆಗೆ ಕಸಬಾ ಹೋಬಳಿಯಲ್ಲಿ 504 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಜುಲೈ  20 ರ ವರೆಗೆ ತಾಲೂಕಿನ ಕಸಬಾ ಹೋಬಳಿಯಲ್ಲಿ 1159 ಮಿ.ಮೀ. ಬಿದ್ದಿತ್ತು.ಈ ವರ್ಷ ಇಲ್ಲಿಯವರೆಗೆ 741.8 ಮಿ.ಮೀ.ಮಳೆ ಬಿದ್ದಿದೆ.ಕಳೆದ ಎರಡು ದಿನಗಳ ಬಾರೀ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಅಡಚಣೆಯಾಗಿದೆ.



ಮಳೆಯಿಂದಾಗಿ ಕಳಸ- ಹೊರನಾಡು ರಸ್ತೆ ಮುಳುಗಡೆಯಾಗಿದೆ. ಇಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲು ಪ್ರಕೃತಿ ವಿಕೋಪನಿರ್ವಹಣಾ ತಂಡಕ್ಕೆ ಸೂಚನೆ ನೀಡಲಾಗಿದೆ. ಕಳಸದ ಕೇಂದ್ರ ಸ್ಥಾನದಲ್ಲಿ ಇರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಟಿ ಬಿ.ಎಸ್.ಶೇಖರಪ್ಪ, ಡಿಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement