ಕಲಾವಿದರ ವಿವರ ಸಂಗ್ರಹ
ಚಿಕ್ಕಮಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ, ಕಲಾವಿದರು ಮಾಸಾಶನ ಪಡೆಯುತ್ತಿರುವ ಹಾಗೂ ವಸತಿ ರಹಿತ ಬದುಕು ಸಾಗಿಸುತ್ತಿರುವ ಕಲಾವಿದರ ವಿವರವನ್ನು ಸಂಗ್ರಹಿಸಲಾಗುತ್ತಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಮಾಸಾಶನ ಪಡೆಯುತ್ತಿರುವ ಕಲಾವಿದರು ತಮ್ಮ ಹೆಸರು ಮತ್ತು ವಿಳಾಸ, ವಯಸ್ಸು, ಸ್ವಂತ ವಸತಿ ಇದೆಯಾ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಬಿಳಿ ಹಾಳೆಯಲ್ಲಿ ಬರೆದು ಸಹಾಯಕ ನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆ, ಕುವೆಂಪು ಕಲಾಮಂದಿರ, ಚಿಕ್ಕಮಗಳೂರು ಇವರಿಗೆ ಸಲ್ಲಿಸಲು ತಿಳಿಸಿದೆ.