ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಸಲ್ಲದ ಆರೋಪ'

Rashmi Kasaragodu
Updated On : 24 Jul 2014, 11:24 am

ಮೂಡಿಗೆರೆ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಧ್ವನಿವರ್ಧಕ, ಸ್ಟೇಜ್‌ಮ್ಯಾಟ್, ಜನರೇಟರ್ ಹಾಗೂ ವೇದಿಕೆಯ ಬಾಬ್ತು ಹಣವನ್ನು ಈವರೆಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ನೀಡಿಲ್ಲ ಎಂದು ದಿಲ್ಷನ್ ಅಂಡ್ ಡೆಕೋರೇಟ್ಸ್ ಮಾಲೀಕ ಡ್ಯಾನಿ ಕಿಶೋರ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆಟ್ಟಗೆರೆ ಮನೋಜ್ ತಿಳಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014 ರ ಮೇ 9 ರಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮೂಡಿಗೆರೆ ಹೊಯ್ಸಳ ಕ್ರೀಡಾಂಗಣಕ್ಕೆ ಆಗಮಿಸಿದಾಗ ಸದರಿ ಮಾಲೀಕರಿಂದ ಮೈಕ್‌ಸೆಟ್ ಸೇರಿದಂತೆ ಇತರೆ ವಸ್ತುಗಳನ್ನು ಬಾಡಿಗೆ ಪಡೆದಿದ್ದು, ಅವುಗಳನ್ನು ಹಿಂದಿರುಗಿಸಿದ ನಂತರ ಬಾಡಿಗೆ ಹಣವನ್ನು ನೀಡಲಾಗಿದೆ.
ಆದರೆ, ಕೆಲವು ವ್ಯಕ್ತಿಗಳು ಕಾಂಗ್ರೆಸ್ ಹಾಗೂ ಬ್ಲಾಕ್ ಅಧ್ಯಕ್ಷ ಎಂ.ಪಿ.ಮನು ಹೆಸರನ್ನು ಹಾಳು ಮಾಡಲು ಸಂಚು ರೂಪಿಸುತ್ತಿದ್ದು, ಡೆಕೋರೆಟ್ ಮಾಲೀಕನಿಂದ ಕಾಲಿ ಪೇಪರ್‌ಗೆ ಸಹಿ ಹಾಕಿಸಿ ರು. 36.500 ಬಾಕಿ ಎಂದು ನಮೂದಿಸಿ ಆತನಿಂದಲೇ ಪತ್ರಕರ್ತರಿಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಆದರೇ ಸದರಿ ಮಾಲೀಕ ಡ್ಯಾನೀ ಕಿಶೋರ್ 23 ರಂದು ಬುಧವಾರ ಯಾವುದೂ ಬಾಕಿ ಇಲ್ಲವೆಂದು ಲಿಖಿತ ಹೇಳಿಕೆ ನೀಡಿದ್ದಾರೆಂದು ತಿಳಿಸಿದರು. ಹಾಗೂ ಪಕ್ಷದ ಅಧ್ಯಕ್ಷರ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ಕೊಡಲು ನಿರ್ಧರಿಸಿರುವುದಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement