ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಫಿ ಬೆಳೆಗಾರರು ಹಳೆಯ ಪದ್ಧತಿಗೆ ಜೋತು ಬೀಳದಿರಿ: ಹೇಮಂತಕುಮಾರ್

Rashmi Kasaragodu
Updated On : 25 Jul 2014, 11:18 am

ಚಿಕ್ಕಮಗಳೂರು: ಕಾಫಿ ಬೆಳೆಗಾರರು ತೋಟಗಳ ನಿರ್ವಹಣೆಯಲ್ಲಿ ಹಳೆಯ ಪದ್ಧತಿಗೆ ಜೋತು ಬೀಳದೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಉಪ ನಿರ್ದೇಶಕ ಟಿ.ಸಿ. ಹೇಮಂತಕುಮಾರ್ ಸಲಹೆ ಮಾಡಿದ್ದಾರೆ.
ಚಿಕ್ಕಮಗಳೂರು ತಾ. ನರಗನಹಳ್ಳಿಯಲ್ಲಿ ಕಾಫಿ ಮಂಡಳಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಮೂಹ ಸಂವಹನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಬಳಸುತ್ತಿದ್ದ ಪದ್ಧತಿ ಅಂದಿನ ಕಾಲದ ಹವಾಮಾನಕ್ಕೆ ಸರಿಯಾಗಿತ್ತು. ಆದರೆ, ಆ ಪದ್ಧತಿ ಬದಲಾದ ಇಂದಿನ ಸನ್ನಿವೇಶಕ್ಕೆ ಸರಿಹೊಂದುವುದಿಲ್ಲ ಎಂದ ಅವರು, ಇದನ್ನು ಬೆಳೆಗಾರರು ಅರಿತು ಹೊಸ ಹೊಸ ಆವಿಷ್ಕಾರಗಳನ್ನು ಮತ್ತು ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮುಖಾಂತರ ಹೆಚ್ಚಿನ ಇಳುವರಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಹರಿಯಪ್ಪ ಮಾತನಾಡಿ, ಕಾಫಿ ತೊಟಗಳಲ್ಲಿ ಹೆಚ್ಚಿನ ಬೆಳೆ ಪಡೆಯಬೇಕಾದರೆ ಬೆಳೆಗಾರರು ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವುದರೊಂದಿಗೆ, ಸಕಾಲಕ್ಕೆ ಆಗತ್ಯ ಪ್ರಮಾಣದ ಗೊಬ್ಬರ ಬಳಸುವ ಮೂಲಕ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾಫಿ ತೋಟಗಳ ನಿವಾಹಣೆ ಮತ್ತು ರೋಗಗಳ ನಿವಾರಣೆ ಕುರಿತು ವಿಜ್ಞಾನಿ ಡಿ.ಎಸ್. ಮುಖಾರಿಬ್ ಬೆಳೆಗಾರರಿಗೆ ಮಾಹಿತಿ ನೀಡಿದರು. ಕಾಫಿ ಮಂಡಳಿಯ ಮಾಜಿ ಸದಸ್ಯ ಎ.ಎಸ್. ಶಂಕರೇಗೌಡ, ವಿಜ್ಞಾನಿಗಳಾದ ಎಂ.ಎಸ್. ಉಮಾ, ಎ.ಪಿ. ರಂಜನಿ, ಕಾಫಿ ಬೆಳೆಗಾರ ಐ.ಬಿ. ಶಂಕರ್ ಉಪಸ್ಥಿತರಿದ್ದರು. ವೆಂಕನಗೌಡ ಸ್ವಾಗತಿಸಿದರು. ಹಿರಿಯ ಸಂಪರ್ಕಾಧಿಕಾರಿ ಡಾ. ಎಂ. ಕರತ್ತಮಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement