ಕಾಳುಮೆಣಸು ಗಿಡ ಪರಿಕರ ವಿತರಣೆ
ಕೊಪ್ಪ: 2014- 15ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಅಡಿ ಕಾಳುಮೆಣಸು ಪುನಶ್ಚೇತನ ಕಾರ್ಯಕ್ರಮದಲ್ಲಿ ಗಿಡ ಹಾಗೂ ಪರಿಕರ ನೀಡುವ ಸಲುವಾಗಿ ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ತಾಲೂಕಿಗೆ 120 ಹೆಕ್ಟೇರ್ ಗುರಿ ಇದ್ದು, ಪ್ರತಿ ಫಲಾನುಭವಿಗೆ ಒಂದು ಎಕರೆವರೆಗೆ ಮಾತ್ರ ಕಾಳುಮೆಣಸು ಗಿಡಗಳು ಹಾಗೂ ಪರಿಕರ ನೀಡಲಾಗುವುದು. ಮೊದಲು ಅರ್ಜಿ ನೀಡಿದ ರೈತರಿಗೆ ಆದ್ಯತೆ ನೀಡಲಾಗುವುದು ಹಾಗೂ 2013- 14ನೇ ಸಾಲಿನಲ್ಲಿ ಸದರಿ ಕಾರ್ಯಕ್ರಮದ ಅಡಿ ಸಹಾಯಧನ ಪಡೆದ ರೈತರಿಗೆ ಈ ಸೌಲಭ್ಯ ಪಡೆಯಲು ಅವಕಾಶವಿರುವುದಿಲ್ಲ. ಅರ್ಹ ಫಲಾನುಭವಿಗಳು ಕೊಪ್ಪ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಜುಲೈ 30ರಿಂದ ಆಗಸ್ಟ್ 6 ವರೆಗೆ ಅರ್ಜಿ ಪಡೆದು ಸ್ಥಳದಲ್ಲೇ ಕೊಡಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಧಿಕಾರಿ ರೇಖಾ ತಿಳಿಸಿದ್ದಾರೆ.