ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೈಸೂರಿನಲ್ಲಿ ವಿಶ್ವ ಆದಿವಾಸಿ ದಿನಾಚರಣೆ

Rashmi Kasaragodu
Updated On : 26 Jul 2014, 11:12 am

ಮೂಡಿಗೆರೆ:  ರಾಜ್ಯದ ಆದಿವಾಸಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹರಿಸಿಕೊಳ್ಳುವ ದೃಷ್ಟಿಯಿಂದ ಆ.8, 9 ರಂದು ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ 20ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಆದಿವಾಸಿ ಕಲಾಮೇಳ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ನ ಜಿಲ್ಲಾಧ್ಯಕ್ಷೆ ಕೆ.ರಾಜಮ್ಮ ಹೇಳಿದ್ದಾರೆ.
ಇಲ್ಲಿನ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡಕಟ್ಟುಗಳ ಜನಜಾಗೃತಿಗೆ ಆದಿವಾಸಿಗಳ ಕಲಾಮೇಳ, ವಿಚಾರ ಸಂಕಿರಣ, ಸಮ್ಮೇಳನ, ಆದಿವಾಸಿ ಹಬ್ಬಗಳನ್ನು ಸಂಘಟಿಸಬೇಕಾಗಿದೆ. 1995 ರಿಂದ ವಿಶ್ವ ಸಂಸ್ಥೆಯ ವಿಶ್ವ ಆದಿವಾಸಿ ದಿನಾಚರಣೆ ಆಚರಿಸುತ್ತಿದೆ. ಇದರ ಭಾಗವಾಗಿ ಮೈಸೂರಿನಲ್ಲಿ ನಡೆಯಲಿರುವ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯದ ಬುಡಕಟ್ಟು ಸಂಸದರು, ಶಾಸಕರು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಲ್ಯಾಂಪ್ ಸೊಸೈಟಿ ಮಾಜಿ ಅಧ್ಯಕ್ಷ ಬೆಟ್ಟದಮನೆ ಮುತ್ತಪ್ಪ ಮಾತನಾಡಿ, ಗಿರಿಜನರ ಬಹು ಬೇಡಿಕೆಯ ದಾಲ್ಚಿನ್ನಿ ಎಲೆಗಳ ಸಂಗ್ರಹಕ್ಕೆ ಅವಕಾಶ ಕಲ್ಪಿಸಬೇಕು. ಸರ್ಕಾರ ಮನ್ನಾ ಮಾಡಿರುವ ಸಾಲ ಯೋಜನೆಯ ಮೊತ್ತವನ್ನು ಲ್ಯಾಂಪ್ಸ್ ಸೊಸೈಟಿಗೆ ತಕ್ಷಣ ಬಿಡುಗಡೆ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್‌ನ ಸಂಘಟನಾ ಕಾರ್ಯದರ್ಶಿ ಕಳಸ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ. ಚಂದ್ರಶೇಖರ್, ಮುಖಂಡರಾದ ಸುಂದರ್‌ಕುಮಾರ್,  ಕುಸುಮಾವತಿ, ಮಹೇಶ್ ಶೆಟ್ಟಿಕೊಪ್ಪ, ಸುಲೋಚನಾ, ಕಳಸ ಕೃಷ್ಣಪ್ಪ, ನೀಲಯ್ಯ, ವಾಸು ಹೊಸನಗರ, ಸುಂದರ ಕವನಹಳ್ಳ, ವಿಜೇಂದ್ರ, ರಮೇಶ್, ಅಣ್ಣಪ್ಪ, ರಮೇಶ್, ರವಿ ಹೊಯ್ಸಳಲು ಮತ್ತಿತರರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement