ಯುವತಿ ಮೇಲೆ ಅತ್ಯಾಚಾರ: ದೂರು
ಚಿಕ್ಕಮಗಳೂರು: ನಗರದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ನಡೆಸಿರುವ ಆರೋಪಿ ಮಂಜುನಾಥ್ ತಲೆ ಮರೆಸಿಕೊಂಡಿದ್ದಾನೆ.
ಆರೋಪಿ ಮಂಜುನಾಥ್ ಹಾಗೂ 18 ವರ್ಷದ ಯುವತಿ ನಗರದ ಹೊರವಲಯಲ್ಲಿರುವ ಗೌಡ್ನಳ್ಳಿಯಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಮಂಜುನಾಥ್ ಕಳೆದ ನಾಲ್ಕು ತಿಂಗಳ ಹಿಂದೆ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾಳೆ.
ಯುವತಿ ಚಿಕ್ಕಮಗಳೂರು ತಾಲೂಕಿನವರಾಗಿದ್ದು, ಮಂಜುನಾಥ್ ಮೂಲತ: ಅರಸಿಕೆರೆಯವರಾಗಿದ್ದು, ಇಲ್ಲಿನ ದಂಟರಮಕ್ಕಿ ಬಡಾವಣೆಯಲ್ಲಿ ವಾಸವಾಗಿದ್ದರು. ಯುವತಿ ನೀಡಿರುವ ದೂರಿನನ್ವಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.