ರಾಜನ್ ವಜಾಕ್ಕೆ ಆಗ್ರಹ
ಚಿಕ್ಕಮಗಳೂರು: ಕ್ಯಾಟರಿಂಗ್ ಸೂಪರ್ವೈಸರ್ ಅರ್ಶದ್ ಜುಬೈರ್ ಅವರಿಗೆ ಬಲವಂತವಾಗಿ ಚಪಾತಿಯನ್ನು ತಿನಿಸಿದ ಶಿವಸೇನೆಯ ಸಂಸದ ರಾಜನ್ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಷ್ಟ್ರಪತಿಯನ್ನು ಆಗ್ರಹಿಸಿದೆ.
ಈ ಸಂಬಂಧ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ಹಾಗೂ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದ ಸಂದರ್ಭ ಎ.ಯು. ಯೂಸುಫ್ ಹಾಜಿ, ಕೃಷ್ಣಮೂರ್ತಿ, ಶೋಭಾ ರಾಣಿ, ತೇರೆಸ ಲೋಬೋ ಇತರರು ಇದ್ದರು.