ವಿದ್ಯಾರ್ಥಿಗಳ ಕೈಯಲ್ಲಿ ದೇಶದ ಭವಿಷ್ಯ: ಗೋಪಾಲರಾವ್
ಶೃಂಗೇರಿ: ಶಾಲಾ ಕಾಲೇಜು ದಿನಗಳಿಂದಲೇ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಬಿ.ವಿ.ಗೋಪಾಲರಾವ್ ಹೇಳಿದರು.
ತಾಲೂಕಿನ ಬೇಗಾರು ರಾಮಣ್ಣಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘ ಹಾಗೂ ಮಲೇರಿಯಾ ವಿರೋಧಿ ಮಾಸಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ದೇಶ, ಸಮಾಜದ ಭವಿಷ್ಯ ಅಡಗಿರುವುದು ವಿದ್ಯಾರ್ಥಿಗಳ ಕೈಯಲ್ಲಿ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಸಮಾಜ, ದೇಶದ ಬಗ್ಗೆ ಚಿಂತಿಸಬೇಕು. ರಾಷ್ಟ್ರನಾಯಕರ ಆದರ್ಶ ಅಳವಡಿಸಿ ಕೊಳ್ಳಬೇಕು.ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಹೇಳಿದರು.
ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರಹಾಕಲು ಒಂದು ವೇದಿಕೆಯಾಗಿದೆ. ಇದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಸಂಬಂಧಿಸಿದೆ ಎಂದು ಹೇಳಿದರು. ಮಲೇರಿಯಾ ವಿರೋಧಿ ಮಾಸಾಚಾರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ರವೀಂದ್ರ ಮಲ್ಯ ನಾವು ನಮ್ಮ ಸುತ್ತಮುತ್ತಲ ವಾತಾವರಣದ ನೈರ್ಮಲ್ಯ ಕಾಪಾಡಬೇಕು.
ಜನರಲ್ಲಿ ಮಲೇರಿಯ ಬಗ್ಗೆ ಜಾಗೃತಿ,ಅರಿವು ಮೂಡಿಸಬೇಕಿದೆ.ಇಂತಹ ಮಾಸಾಚಾರಣೆಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಾಗಿ ನಡೆಯಬೇಕಿದೆ ಎಂದರು.
ಕೀರ್ತನಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಾನಂದ ಕಾಮತ್, ಎಚ್.ಎಸ್.ಸತೀಶ್ ಉಪಸ್ಥಿತರಿದ್ದರು. ಲಕ್ಷ್ಮಣ್ನಾಯಕ್ ಸ್ವಾಗತಿಸಿದರು.