ಎಲ್ಲರೂ ಸೈನಿಕರನ್ನು ಸ್ಮರಿಸಲಿ
ಮೂಡಿಗೆರೆ: ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಸೈನಿಕರನ್ನು ಪ್ರತಿಯೊಬ್ಬರೂ ನೆನೆಯಬೇಕು ಎಂದು ಬಿಜೆಪಿ ತಾಲೂಕು ವಕ್ತಾರ ವಿನೋದ್ ಕಣಚೂರು ತಿಳಿಸಿದರು.
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗುಳ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುನೀಲ್ ನಿಡುಗೂಡು ಮಾತನಾಡಿದರು. ರಾಘವೇಂದ್ರ, ಶರತ್, ಎಸ್ಡಿಎಂಸಿ ಮಂಜಪ್ಪ, ಪರೀಕ್ಷಿತ್, ಪ್ರವೀಣ್ ಪೂಜಾರಿ, ಪಂಚಾಕ್ಷರಿ, ಮುಖ್ಯ ಶಿಕ್ಷಕ ಜಾನಪ್ಪ ಇತರರು ಇದ್ದರು.
ವಿಜ್ಞಾನ ವಿಭಾಗಕ್ಕೆ ಶೇ. 100 ಫಲಿತಾಂಶ
ತರೀಕೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ. 100 ರಷ್ಟು ಫಲಿತಾಂಶ ದೊರಕಿದೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ. ಅಂತಿಮ ಬಿಎಸ್ಸಿಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ರಶೀದಾಬಾನು ಶೇ. 80ರಷ್ಟು ಅಂಕ ಪಡೆದು ಕಾಲೇಜಿಗೆ ಉನ್ನತ ಸ್ಥಾನ ಪಡೆದಿದ್ದಾರೆ. ಐದು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾರೆ. ಬಿಬಿಎಂನಲ್ಲಿ ರೀನಾ ಕಾನಮ್, ಬಿಕಾಂನಲ್ಲಿ ಹೀನಾ ತಬಸ್ಸುಮಾ, ಬಿಎಯಲ್ಲಿ ಲೋಹಿತ್ಕುಮಾರ್ ಅವರು ಅತಿ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಪ್ರಾಚಾರ್ಯರು ಶುಭ ಕೋರಿದ್ದಾರೆ.