ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎಳ್ಳೂರಿನಲ್ಲಿ ಮತ್ತೆ ಮರಾಠಿ ನಾಮಫಲಕ: ನಗರದಲ್ಲಿ ಕನ್ನಡಸೇನೆ ಪ್ರತಿಭಟನೆ

Rashmi Kasaragodu
Updated On : 27 Jul 2014, 11:17 am

ಚಿಕ್ಕಮಗಳೂರು: ತಾಳ್ಮೆ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಸಹಬಾಳ್ವೆ ಮಾಡುತ್ತಿರುವುದನ್ನೆ ನಮ್ಮ ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಿ ಮರಾಠಿಗರು ಪದೇ ಪದೇ ಕಾಲು ಕೆರೆದು ಕನ್ನಡಿಗರನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಎಚ್ಚರಿಸಿದ್ದಾರೆ.
ಎಳ್ಳೂರಿನಲ್ಲಿ ಮಹಾರಾಷ್ಟ್ರ ಎಂದು ಮರಾಠಿ ನಾಮಫಲಕವನ್ನು ಮರು ನಾಮಕರಣ ಮಾಡಿರುವ ಕ್ರಮವನ್ನು ಖಂಡಿಸಿ ಶನಿವಾರ ನಗರದ ಹನುಮಂತಪ್ಪ ವೃತ್ತದಲ್ಲಿ ಕನ್ನಡಸೇನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ವಿನಾಶಕಾಲೆ ವಿಪರೀತ ಬುದ್ಧಿ ಎಂಬ ಗಾದೆಮಾತಿಗೆ ಅನುಗುಣವಾಗಿ ಮರಾಠಿಗರು ಪುಂಡಾಟಿಕೆ ನಡೆಸುತ್ತಿದ್ದಾರೆ. ಗಡಿ ವಿಚಾರದಲ್ಲಿ ಸುಖಾಸುಮ್ಮನೆ ಕಾಲು ಕೆರೆದು ಜಗಳಕ್ಕೆ ಬರುವ ಎಂಇಎಸ್ ಪುಂಡರು, ಆರ್.ಟಿ.ಎ. ಕಾರ್ಯಕರ್ತ ಭೀಮಪ್ಪ ಸುಪ್ರಿಂ ಕೋರ್ಟ್‌ನ ಮೋರೆಹೋಗಿ ಮರಾಠಿ ನಾಮಫಲಕ ತೆರವು ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ನೀಡಿದ್ದರು. ಅದನ್ನು ಮೀರಿ ಎಳ್ಳೂರಿನಲ್ಲಿ ಮರಾಠಿ ಭಾಷೆಯಲ್ಲಿ ಮಹಾರಾಷ್ಟ್ರ ಎಂದು ನಾಮಫಲಕವನ್ನು ಮತ್ತೆ ಹಾಕಿರುವುದು ಇವರ ಗರ್ವತನ ಪ್ರದರ್ಶಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕನ್ನಡ  ಸೇನೆ ನಗರಾಧ್ಯಕ್ಷ ಪ್ರವೀಣಕುಮಾರ್, ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ, ದೇವರಾಜ್, ಮುಖಂಡರಾದ ನೀಲೇಶ್, ಲೋಕೇಶ್, ಕುಪ್ಪೇನಹಳ್ಳಿ ರಾಜು, ಗುರು, ಕೃಷ್ಣ ಹಾಗೂ  ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement