ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನಪ್ರಿಯ- ಜನಪ್ರಿಯತೆ ನಡುವೆ ತುಂಬಾ ವ್ಯತ್ಯಾಸ: ಶಾಸಕ ದತ್ತ

Rashmi Kasaragodu
Updated On : 27 Jul 2014, 11:16 am


ಬೀರೂರು (ಅಜ್ಜಂಪುರ ಜಿ.ಸೂರಿ ವೇದಿಕೆ): ಜನಪ್ರತಿನಿಧಿ ಜನಪ್ರಿಯತೆ ಕೇವಲ ಐದು ವರ್ಷವಾದರೆ ಜನಪ್ರಿಯವಾಗುವುದು ಆತನ ಉತ್ತಮ ವ್ಯಕ್ತಿತ್ವದಿಂದ ಶಾಶ್ವತವಾಗುತ್ತದೆ. ಜನಪ್ರಿಯ ಹಾಗೂ ಜನಪ್ರಿಯತೆ ನಡುವೆ ತುಂಬಾ ವ್ಯತ್ಯಾಸವಿದೆ ಎಂದು ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯಪಟ್ಟರು.
ತಾಲೂಕಿನ ಬೀರೂರು ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರಳ ಬದುಕಿನ ಮೂಲಕ ರಾಜಕೀಯ ಬದಲಾವಣೆ ಎಂಬ ವಿಷಯದ ಕುರಿತು ಮಾತನಾಡಿದರು.
ರಾಜಕಾರಣಿ ತನಗೆ ಸಿಕ್ಕ ಅಧಿಕಾರದ ಅವಧಿಯಲ್ಲಿ ಉತ್ತಮ ಸೇವೆ ಮಾಡಿದಲ್ಲಿ ಮಾತ್ರ ಉತ್ತಮ ರಾಜಕಾರಣಿ ಎನಿಸಿಕೊಳ್ಳುತ್ತಾನೆ ಎಂಬುದು ಒಂದು ಅಭಿಪ್ರಾಯವಾದರೆ, ಜನರ ನಡುವೆ ಇದ್ದು ಸದಾ ಜನರ ಕೈಗೆ ಸಿಗುವ ರಾಜಕಾರಣಿಯಾದರೆ ಈತ ಚೀಪ್ ಶಾಸಕ ಎಂದು ಮಾತಾಡುತ್ತಾರೆ.
ಕೈಗೆ ಸಿಗದ ರಾಜಕಾರಣಿಯಾದರೆ ಹೈಟೆಕ್ ರಾಜಕಾರಣಿ ಎನಿಸಿಕೊಳ್ಳುತ್ತಾನೆ. ಆದರೆ ನಮ್ಮ ನಿಲುವಿಗೆ ಅಂಟಿಕೊಂಡು ಜನರ ಜತೆ ಸರಳವಾಗಿ ರಾಜಕೀಯ ಸೇವೆ ಮಾಡಬೇಕು. ರಾಜಕಾರಣಿ ಎಲ್ಲ ವೈರುಧ್ಯ ಎದುರಿಸಿ ರಾಜಕಾರಣ ಮಾಡಬೇಕಾಗುತ್ತದೆ.
ರಾಜಕಾರಣಿಯ ನಡೆ ಗಮನಿಸಬೇಕು. ಅತನನ್ನು ಜನರು ಎಚ್ಚರಿಸದೇ ಇದ್ದಾಗ ಆತ ಎಡವಿ ಜನರೂ ಎಡವುತ್ತಾರೆ. ಇದಕ್ಕೆ ನಾವು- ನೀವು ಕಾರಣರಾಗುತ್ತೇವೆ ಎಂದರು.
ಸರಳ ಬದುಕಿನ ಮೂಲಕ ರಾಜಕಾರಣದಲ್ಲಿ ಬದಲಾವಣೆ ತರಲು ಜನ ಕಾರಣರಾಗಬೇಕು. ಬಸವಣ್ಣನವರ ವಚನ ಉದಾಹರಿಸಿ ಮಾತನಾಡಿದ ದತ್ತ, ಶರಣರನ್ನು ಎದುರು ಹಾಕಿಕೊಂಡಲ್ಲಿ ಸುಣ್ಣದಕಲ್ಲು ಕಟ್ಟಿಕೊಂಡು ನೀರಿನ ಮಡುವಿನಲ್ಲಿ ಬಿದ್ದಂತೆ ಎಂಬ ವಚನ ಹೇಳುವ ಮೂಲಕ ಬಸವಣ್ಣನವರೇ ಪ್ರಜೆಗಳೇ ಪ್ರಭುಗಳು ಎಂದು ಹೇಳಿ ನಿಜವಾದ ಪ್ರಜಾಪ್ರಭುತ್ವಕ್ಕೆ ಉತ್ತಮ ವ್ಯಾಖ್ಯಾನ ಬರೆದಿದ್ದಾರೆ.
ಏನೂ ಮಾಡಿಕೊಂಡಿಲ್ಲವೇ:  ನಾನು ಆಟೋದಲ್ಲಿ ಹೋಗುವುದನ್ನು ನೋಡುವ ಜನರು ದೇವೇಗೌಡರ ಹತ್ತಿರ ಇಷ್ಟು ವರ್ಷವಿದ್ದರೂ ಏನೂ ಮಾಡಿಕೊಂಡಿಲ್ಲವೇ ಎಂದು ಮಾತನಾಡುತ್ತಾರೆ ಎಂದ ಅವರು, ರಾಜಕೀಯ ಕ್ಷೇತ್ರವೇ ಅಲ್ಲದೆ ಎಲ್ಲ ಕ್ಷೇತ್ರಗಳೂ ಕಲುಷಿತಗೊಂಡಿದ್ದು ಇದನ್ನು ಜಾಗೃತಗೊಳಿಸಲು ಇಂತಹ ಸಮ್ಮೇಳನಗಳನ್ನು ಪ್ರಯೋಗಕ್ಕೆ ಒಡ್ಡಲಾಗುತ್ತಿದೆ. ಆ ಮೂಲಕ ಸರಳ ರಾಜಕಾರಣದ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ ಎಂದರು.


ಕೈಗೆ ಸಿಗದ ರಾಜಕಾರಣಿಯಾದರೆ ಹೈಟೆಕ್ ರಾಜಕಾರಣಿ ಎನಿಸಿಕೊಳ್ಳುತ್ತಾನೆ. ಆದರೆ ನಮ್ಮ ನಿಲುವಿಗೆ ಅಂಟಿಕೊಂಡು ಜನರ ಜತೆ ಸರಳವಾಗಿ ರಾಜಕೀಯ ಸೇವೆ ಮಾಡಬೇಕು. ರಾಜಕಾರಣಿ ಎಲ್ಲ ವೈರುಧ್ಯ ಎದುರಿಸಿ ರಾಜಕಾರಣ ಮಾಡಬೇಕಾಗುತ್ತದೆ. ರಾಜಕಾರಣಿಯ ನಡೆ ಗಮನಿಸಬೇಕು. ಅತನನ್ನು ಜನರು ಎಚ್ಚರಿಸದೇ ಇದ್ದಾಗ ಆತ ಎಡವಿ ಜನರೂ ಎಡವುತ್ತಾರೆ. ಇದಕ್ಕೆ ನಾವು- ನೀವು ಕಾರಣರಾಗುತ್ತೇವೆ.
ಟಿ ವೈಎಸ್‌ವಿ ದತ್ತ, ಶಾಸಕ


ಉತ್ತಮ ಕವಿತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಹಾಗೂ ಜನರಲ್ಲಿ ಅರಿವು ಮೂಡಿಸುವ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಬಲ್ಲದು.ಕವಿಯ ಒಳ ಮನಸ್ಸು ಆ ವಿಚಾರದಲ್ಲಿ ಬದ್ಧತೆ ಪ್ರತಿಬಿಂಬಿಸುತ್ತದೆ. ಬದುಕಿನಲ್ಲಿ ಪ್ರತಿದಿನ ನಡೆಯುವ ಸಣ್ಣಪುಟ್ಟ ಘಟನೆಗಳು ಒಳ ದೃಷ್ಟಿಯಿಂದ ನೋಡುವ ಕಣ್ಣಿಗೆ ಬರವಣಿಗೆಗೆ ಸ್ಪೂರ್ತಿ ನೀಡುತ್ತದೆ
ಟಿ ಬಿ.ಆರ್. ಲಕ್ಷ್ಮಣರಾವ್, ಕವಿ  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement