ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇಶಕ್ಕಾಗಿ ಪ್ರಾಣ ತೆತ್ತವರ ಸದಾ ಸ್ಮರಿಸೋಣ

Rashmi Kasaragodu
Updated On : 27 Jul 2014, 11:17 am

ತರೀಕೆರೆ: ದೇಶಕ್ಕಾಗಿ ಪ್ರಾಣ ಕೊಟ್ಟವರನ್ನು ನೆನಪಿಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ಟಿಎಂಎಸ್ ಕಾಲೇಜು ಪ್ರಾದ್ಯಾಪಕ ಶಾಶ್ವತ ಭಟ್ ಹೇಳಿದರು. ಎಬಿವಿಪಿ, ಎಸ್‌ಜೆಎಂ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶಭಕ್ತಿ ಮರೆಯಬಾರದು, ಸೈನಿಕರ ಶ್ರಮದಿಂದ ಕಾರ್ಗಿಲ್ ವಿಜಯವಾಯಿತು. 77 ದಿನ ಕಾರ್ಗಿಲ್ ಯುದ್ಧವಾಯಿತು, ಪ್ರಾಣಕೊಟ್ಟ ನೂರಾರು ಸೈನಿಕರನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಮಾಜಿ ಸೈನಿಕ ಮಿಲ್ಟ್ರಿ ಶ್ರೀನಿವಾಸ್ ಮಾತನಾಡಿ ಶಿಸ್ತು ಬದ್ಧ ನೀತಿಯಿಂದಾಗಿ ಭಾರತೀಯ ಸೈನಿಕರಿಗೆ 72 ಗಂಟೆ ಉಪವಾಸ ಮಾಡುವ ಶಕ್ತಿ ಇದೆ. ಕಾರ್ಗಿಲ್ ಯುದ್ಧ ನಡೆದ ಸ್ಥಳ ದುರ್ಗಮ ಮತ್ತು ಎತ್ತರವಾದ ಪ್ರದೇಶವಾಗಿದೆ. ವಿವಿಧತತೆಯಲ್ಲಿ ಏಕತೆ ಕಂಡ ದೇಶ ನಮ್ಮದು, ವಿಶೇಷ ಸ್ಥಾನಮಾನ ಇದೆ. ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಎಂದು ಯೋಚಿಸಬೇಕು, ಯುವಶಕ್ತಿ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಮಾತನಾಡಿ ಜ್ಞಾನದ ಹಸಿವು ತೀರಿಸಿಕೊಳ್ಳಲು ಪ್ರಯತ್ನಿಸಬೇಕು. ನಾವು ಆರಾಮವಾಗಿರಲು ಕಾರಣ ರೈತರು ಸೈನಿಕರು ಕಾರಣ ಎಂದ ಅವರು, ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು, ಯುವಜನತೆಯಿಂದ ಬದಲಾವಣೆ ಸಾಧ್ಯ. ದೇಶ ಕಟ್ಟಿದ ಮಹಾನ್ ಚೇತನಗಳ ಸ್ಮರಣೆ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಲಿಂಗಪ್ಪ ಮಾತನಾಡಿ ನಮ್ಮ ದೇಶ ಅಗಾಧ ಮಿಲಿಟರಿ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಘಟಕ ಪ್ರತಾಪ್ ಪ್ರೊ.ಬಿ.ಆರ್.ಡಮ್ಮಳ್ಳಿ, ಪ್ರೊ.ಬಸವರಾಜ್, ಪ್ರೊ.ರಜಪೂತ್, ಸುನೀತ, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement