ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜಕಾರಣ ಸುಲಭದಲ್ಲಿ ಕೈಗೆಟುಕುವ ಕ್ಷೇತ್ರ ಅಲ್ಲ

Rashmi Kasaragodu
Updated On : 27 Jul 2014, 11:16 am

ಬೀರೂರು (ಅಜ್ಜಂಪುರ ಜಿ.ಸೂರಿ ವೇದಿಕೆ):  ರಾಜಕೀಯ ಕ್ಷೇತ್ರ ಎಂದ ಕೂಡಲೇ ಜನ ಸಾಮಾನ್ಯರಲ್ಲಿ ಸುಲಭವಾಗಿ ದಕ್ಕುವ ಹಾಗೂ ಶ್ರಮವಿಲ್ಲದೆ ಗಳಿಸಬಹುದಾದ ಕ್ಷೇತ್ರ ಎಂಬ ಭಾವನೆ ಇದೆ. ಆದರೆ ರಾಜಕಾರಣ ಅಷ್ಟು ಸುಲಭವಾಗಿ ಕೈಗೆಟುಕುವ ಕ್ಷೇತ್ರ ಅಲ್ಲ ಎಂದು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.
ಅವರು ಬೀರೂರಿನಲ್ಲಿ ನಡೆಯುತ್ತಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಲಾಗಿದ್ದ ಗೋಷ್ಠಿಯಲ್ಲಿ ಸಾರ್ವಜನಿಕ ಉತ್ತರದಾಯಿತ್ವ ಕುರಿತು ಮಾತನಾಡಿದರು.
ಪ್ರಜಾಪ್ರಭುತ್ವದ ಮೂಲ ಬೇರಾಗಿರುವ ಉತ್ತರಾದಾಯಿತ್ವ ಇಲ್ಲದಿದ್ದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಿಲ್ಲದಂತಾಗಿದ್ದು, ಇಂದು ಸಂವಿಧಾನದ ಉತ್ತರಾದಾಯಿತ್ವ ಪ್ರಶ್ನಿಸುವ ಹಂತಕ್ಕೆ ದೇಶ ಬಂದು ನಿಂತಿದೆ ಎಂದು ಶಂಕರ್ ನುಡಿದರು.
ಎಲ್ಲ ಕ್ಷೇತ್ರಗಳು ಮೌಲ್ಯ ಕಳೆದುಕೊಳ್ಳುತ್ತವೆ:  ಸಾರ್ವಜನಿಕ ಬದುಕಿನಲ್ಲಿ ಜನಪ್ರತಿನಿಧಿಯಾದವನು ಎತ್ತರದ ಮಟ್ಟಕ್ಕೆ ತಲುಪಿ ಸಚಿವನಾದಾಗ ಕ್ಷೇತ್ರದಿಂದ ರಾಜ್ಯ ದೇಶವನ್ನು ಪ್ರತಿನಿಧಿಸಲು ಹೊರಟು ಇತಿಮಿತಿ ಬಿಟ್ಟು ಹೋಗಲು ಬಾರದ ಸ್ಥಿತಿಯಲ್ಲಿದ್ದಾಗ ಆತ ಜನರ ವಿರೋಧ ಕಟ್ಟಿಕೊಳ್ಳುವ ಸ್ಥಿತಿ ಎದುರಿಸಬೇಕಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಉತ್ತರಾದಾಯಿತ್ವ ಇಲ್ಲದಿದ್ದಲ್ಲಿ ಎಲ್ಲ ಕ್ಷೇತ್ರಗಳು ಮೌಲ್ಯ ಕಳೆದುಕೊಳ್ಳುತ್ತವೆ ಎಂದು ನುಡಿದರು.
ಹಣ, ಜಾತಿ ಮೀರಿದ ರಾಜಕಾರಣ ಮಾಡಿ ಕಡೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಶಾಸಕ ದತ್ತರಿಂದ ಇಲ್ಲಿ ನಿಜವಾದ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದರು. ಸಮ್ಮೇಳನಾಧ್ಯಕ್ಷ ರಹಮತ್ ತರೀಕೆರೆ, ಸ್ವಾಗತ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ, ಡಾ. ಮೋಹನ್ ಆಳ್ವ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement