ವಿನಾಕಾರಣ ಹಕ್ಕುಪತ್ರ ವಜಾಗೊಳಿಸಿದ ಬಿಎಸ್‌ವೈ
ಶಿಕಾರಿಪುರ: ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರಿಗೆ ಹಕ್ಕುಪತ್ರಕ್ಕಾಗಿ ಪತ್ರ ಬರೆದರೂ, ರಾಜ್ಯದಲ್ಲಿ 1.80 ಲಕ್ಷ ಅರ್ಜಿಗಳನ್ನು ವಿನಾಕಾರಣ ವಜಾಗೊಳಿಸಿ ಇದೀಗ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಹಿನ್ನೆಲೆಯಲ್ಲಿ ಸಾಗುವಳಿದಾರ ರೈತರಿಂದ ಅರ್ಜಿಯನ್ನು ಪುನಃ ಪಡೆಯಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ರೈತರನ್ನು ರಾಜಕೀಯ ಹಿತಾಸಕ್ತಿಗಾಗಿ ದಿಕ್ಕುತಪ್ಪಿಸುತ್ತಿದ್ದು, ಅರಣ್ಯ ಭೂಮಿ ಕಾಯ್ದೆ ತಿದ್ದುಪಡಿಗೆ ಆಗ್ರಹಿಸುತ್ತಿರುವ ಬಿಜೆಪಿ ಪ್ರತಿಭಟನೆ ಮತ್ತಿತರ ಚುನಾವಣಾ ತಂತ್ರದಲ್ಲಿ ತೊಡಗಿದೆ ಎಂದರು.
ಜಿಲ್ಲೆಯಲ್ಲಿ 80 ಸಾವಿರ ಅರ್ಜಿ ಕಾನೂನು ಬಾಹಿರವಾಗಿ ವಜಾಗೊಳಿಸಿದ್ದಾರೆ ಎಂದರು.
ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ
ಬೀರೂರು: (ಅಜ್ಜಂಪುರ ಸೂರಿ ವೇದಿಕೆ)
ನಾವೆಲ್ಲ ಬಹುದೊಡ್ಡ ಇತಿಹಾಸದ ವಾರಸುದಾರರಾಗಿದ್ದು, ಈ ರಾಜ್ಯದಲ್ಲಿ ಪ್ರದೇಶಗಳ ಸೀಮಿತತೆಯಲ್ಲಿ ಕನ್ನಡಿಗನನ್ನು ಗುರುತಿಸುವ ಪ್ರವೃತ್ತಿ ನಿಲ್ಲಬೇಕು, ಹಾಗಾದಾಗ ಮಾತ್ರ ಸಮಗ್ರ ಕರ್ನಾಟಕದ ಅಭ್ಯುದಯ ಸಾಧ್ಯ ಎಂದು ಹಿರಿಯ ಪತ್ರಕರ್ತ, ನಾಡೋಜ ಪುರಸ್ಕೃತ ಡಾ. ಪಾಟೀಲ ಪುಟ್ಟಪ್ಪ ತಿಳಿಸಿದರು.
ಬೀರೂರಿನ ತರಳಬಾಳು ಕಲ್ಯಾಣ ಮಂದಿರದಲ್ಲಿ ಶನಿವಾರ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ನಾಡಿನ ಸಮಗ್ರತೆಗೆ ಕೈಗೊಳ್ಳಬೇಕಾದ ಪೂರಕ ಅಂಶದ ಮೇಲೆ ಬೆಳಕು ಚೆಲ್ಲಿದರು.
ಈ ಸಂದರ್ಭದಲ್ಲಿ ಸಾಹಿತಿ ಡಾ. ರಮೇಶ ಚಂದ್ರದತ್ತ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸಮ್ಮೇಳನಾಧ್ಯಕ್ಷ ಡಾ. ರಹಮತ್ ತರೀಕೆರೆ, ಶಾಸಕ ವೈಎಸ್‌ವಿ ದತ್ತ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾ.ಸು. ಶಿವಸ್ವಾಮಿ ಇದ್ದರು.
ತಮಿಳು ಶಾಸ್ತ್ರೀಯ ಭಾಷೆಯ ಸ್ಥಾನ ಪಡೆದು 29 ಕೋಟಿ ಅನುದಾನ ಪಡೆದಿದೆ. ಪ್ರಾಚೀನ ಭಾಷೆಯಾದ ಕನ್ನಡ ಭಾಷೆ, ಲಿಪಿ ಎಲ್ಲವನ್ನು ತಮಿಳು ಭಾಷೆಗಿಂತ ಮುಂಚೆ ಪಡೆದಿದ್ದರೂ ನಯಾ ಪೈಸೆ ಈ ಭಾಷೆಯ ಅಭಿವೃದ್ಧಿಗೆ ಬಿಡುಗಡೆಯಾಗದೆ ಶಾಸ್ತ್ರೀಯ ಸ್ಥಾನಮಾನವೆಂಬುದು ನಾಮ ಕೆ ವಾಸ್ತೆಯಾಗಿದೆ. ರಾಜಕಾರಣಿಗಳು ಬೆಂಗಳೂರು, ಮೈಸೂರು ಅಭಿವೃದ್ಧಿ ಚಿಂತನೆ ಬಿಟ್ಟು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಬೇಕಿದೆ
ಟಿ ಡಾ. ಪಾಟೀಲ ಪುಟ್ಟಪ್ಪ