ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸೇವೆಗೆ ಕವನ ಪ್ರೇರಕವಾದರೆ ಸಾರ್ಥಕ್ಯ

Rashmi Kasaragodu
Updated On : 27 Jul 2014, 11:16 am

ಬೀರೂರು (ಅಜ್ಜಂಪುರ ಜಿ.ಸೂರಿ ವೇದಿಕೆ)
....ಇಂದಿನ ಯುವ ಕವಿಗಳ ಕವನಗಳಲ್ಲಿ
ಸಾಹಿತ್ಯದ ಒಳ ಹೊರಗು
ಕಾಣದಿರುವುದಕ್ಕೆ ಅಧ್ಯಯನ
ಕೊರತೆಯೇ ಕಾರಣ...
ಸಮಾಜಕ್ಕೆ ಸೇವೆ ನೀಡುವ ನಿಟ್ಟಿನಲ್ಲಿ ಕವನಗಳು ಪ್ರೇರಕವಾದರೆ ಅಥವಾ ಉತ್ತೇಜಕವಾದರೆ ಮಾತ್ರ ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ಕವಿ  ಬಿ.ಆರ್. ಲಕ್ಷ್ಮಣರಾವ್ ಹೇಳಿದರು.
ಅವರು 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಯುವ ಕವಿಗಳಿಂದ ರಚಿತವಾಗುತ್ತಿರುವ ಕವನಗಳಲ್ಲಿ ಸಾಹಿತ್ಯದ ಒಳ ಹೊರಗು ಕಾಣಲಾಗುತ್ತಿಲ್ಲ. ಇದಕ್ಕೆ ಕಾರಣ ಅಧ್ಯಯನದ ಕೊರತೆ. ಕವಿತೆ ಒಂದು ವಿಸ್ಮಯ, ಇಂದಿನ ಯುವ ಕವಿಗಳು ವಿಚಾರಶೀಲತೆ ಜಾಗೃತಗೊಳಿಸಿ ಕೊಂಡು ಎಲ್ಲಿಯೂ ಪರಿಪೂರ್ಣತೆ ಕಂಡುಕೊಳ್ಳಲು ಆಗಿಲ್ಲ.
ತಾವು ಕೂಡಾ ಕಳೆದ 50 ವರ್ಷದಿಂದ ಕವಿತೆ ಬರೆಯುತ್ತಿದ್ದರೂ ಹೊಸ ಹೊಸ ವಿಚಾರಗಳು ಪ್ರತಿನಿತ್ಯ ನಮ್ಮ ಬರವಣಿಗೆಯಲ್ಲಿ ವಿಶೇಷತೆ ತರುತ್ತದೆ. ಉತ್ತಮ ಕವಿತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಹಾಗೂ ಜನರಲ್ಲಿ ಅರಿವು ಮೂಡಿಸುವ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಬಲ್ಲದು.ಕವಿಯ ಒಳ ಮನಸ್ಸು ಆ ವಿಚಾರದಲ್ಲಿ ಬದ್ಧತೆ ಪ್ರತಿಬಿಂಬಿಸುತ್ತದೆ. ಬದುಕಿನಲ್ಲಿ ಪ್ರತಿದಿನ ನಡೆಯುವ ಸಣ್ಣಪುಟ್ಟ ಘಟನೆಗಳು ಒಳ ದೃಷ್ಟಿಯಿಂದ ನೋಡುವ ಕಣ್ಣಿಗೆ ಬರವಣಿಗೆಗೆ ಸ್ಪೂರ್ತಿ ನೀಡುತ್ತದೆ ಎಂದು ನುಡಿದರು.
ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಕವಿಗಳು ತಮ್ಮ ಅನುಭವ ವಿಚಾರಗಳನ್ನು ತಮ್ಮ ಕವಿತೆಗಳ ಮೂಲಕ ವಾಚಿಸಿ ಸಾಮಾಜಿಕ ಪಿಡುಗುಗಳಾದ ಅತ್ಯಾಚಾರ, ಸ್ತ್ರೀಶೋಷಣೆ, ಪರಿಸರ ಕುರಿತು ತಮ್ಮ ಕಾಳಜಿ ವ್ಯಕ್ತಪಡಿಸಿದರು. ಸಾಹಿತಿ, ಜಿ.ಸಿ.ಸಿದಪ್ಪ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಶೃಂಗೇರಿ ವೀರಪ್ಪಗೌಡ, ಕಡೂರಿನ ಮೂರ್ತಿ, ಜನ್ನಾಪುರದ ರಘು, ಚಿಕ್ಕಮಗಳೂರಿನ ಸುರೇಶ್‌ರನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement