ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭಾವಿಕೆರೆ ಬಳಿ ಕಾಡಾನೆ ಹಾವಳಿಗೆ ಬೆಳೆಹಾನಿ

Rashmi Kasaragodu
Updated On : 28 Jul 2014, 11:09 am

ತರೀಕೆರೆ:  ಇಲ್ಲಿಗೆ ಸಮೀಪದ ಭಾವಿಕೆರೆ, ಸಿದ್ದರಹಳ್ಳಿ ಸುತ್ತಮುತ್ತ ತೋಟಗಳಿಗೆ ಶನಿವಾರ ಕಾಡಾನೆಗಳು ನುಗ್ಗಿ ಬೆಳೆ ನಾಶಪಡಿಸಿವೆ ಎಂದು ಎಸ್.ಸುರೇಶ್‌ಚಂದ್ರ ತಿಳಿಸಿದ್ದಾರೆ. ಶನಿವಾರ ರಾತ್ರಿ ಸಮಯದಲ್ಲಿ ನುಗ್ಗಿದ ಆನೆಗಳು ಅನೇಕ ತೋಟಗಳಲ್ಲಿ ಬೆಳೆದು ನಿಂತಿದ್ದ ಫಸಲು ತುಂಬಿದ ಬಾಳೆ, ಅಡಕೆ ಮತ್ತು ತೆಂಗಿನ ಮರಗಳನ್ನು ಬುಡಮೇಲುಗೊಳಿಸಿವೆ. ಗೊನೆ ಬಿಟ್ಟ ಬಾಳೆ ಮರಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ಲಕ್ಷಾಂತರ ರು. ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ವಿದ್ಯಾರ್ಥಿ, ಕೃಷಿಕ ಸಂಘ ಉದ್ಘಾಟನೆ
ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಶ್ರೀ ಅಭಿನವ ರಮಾನಂದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ, ಕಲಾ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಶರತ್ ಶೆಟ್ಟಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಗುರಿಯಿಲ್ಲದ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ. ಶಿಕ್ಷಕರ ಮಾರ್ಗದರ್ಶನ ಮತ್ತು ಪೂಷಕರ ಪ್ರೋತ್ಸಾಹ ಪೂರ್ಣವಾಗಿ ದೊರೆತಾಗ ಮಾತ್ರ ವಿದ್ಯಾರ್ಥಿಗಳು ನಿರ್ಧಿಷ್ಟ ಗುರಿ ತಲುಪಲು ಸಾಧ್ಯ.
ಆಧುನಿಕತೆಯ ಭರಾಟೆಯಲ್ಲಿ ಇತ್ತೀಚ್ಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಕೃಷಿ ಚಟುವಟಿಕೆಗಳತ್ತ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು. ಹುಲುಗಾರು ಚಂದ್ರಶೇಖರ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎ.ಎಸ್. ನಯನ, ಟಿ.ಕೆ. ಪರಾಶರ, ಸುಬ್ರಮಣ್ಯ, ಪ್ರಭಾಕರ್, ರವೀಂದ್ರ ಹುಲುಗಾರು ಬೈಲ್, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. ಆದರ್ಶ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿ ವಂದಿಸಿದರು.
ಅನಾಥಾಶ್ರಮಕ್ಕೆ ವ್ಯಕ್ತಿ ಸೇರಿಸಿದ ಸಾರ್ವಜನಿಕರು
ನರಸಿಂಹರಾಜಪುರ: ಪಟ್ಟಣ ಪಂಚಾಯ್ತಿ ಮುಂಭಾಗದ ಬಸ್ಸು ನಿಲ್ದಾಣ ಹಾಗೂ ಪಟ್ಟಣದ ವಿವಿಧ ಕಡೆ ಓಡಾಡುತ್ತಿದ್ದ ಅನಾಥ ವ್ಯಕ್ತಿಯನ್ನು ಗಮನಿಸಿದ ನಾಗರಿಕರು ಆತನಿಗೆ ಶುಶ್ರೂಷೆ ನೀಡಿ ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಗಡ್ಡ ಬಿಟ್ಟಿದ್ದ ವ್ಯಕ್ತಿಯೊಬ್ಬ ಕೆಲವು ದಿನಗಳಿಂದ ಪಟ್ಟಣದ ವಿವಿಧೆಡೆ ಕಾಣಿಸಿಕೊಳ್ಳುತ್ತಿದ್ದ. ಕೆಲಮೊಮ್ಮೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಆತ ಕೆಲವರ ಮನೆಯ ಮುಂದೆ ರಾತ್ರಿ ಮಲಗಿರುತ್ತಿದ್ದ. 3 ದಿನಗಳಿಂದ ಪಟ್ಟಣ ಪಂಚಾಯಿತಿ ಮುಂಭಾಗದ ಬಸ್ ನಿಲ್ದಾಣದಲ್ಲಿ ಮಲಗಿದ್ದ ಈತನನ್ನು ಕಂಡ ಕೆಲ ನಾಗರಿಕರು ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪಪಂ ಆರೋಗ್ಯಾಧಿಕಾರಿ ಲಕ್ಷ್ಮಣ್ 108 ಅಂಬುಲನ್ಸ್
ವಾಹನದ ಮೂಲಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಪಟ್ಟಣದ ಬಿ.ಎನ್.ನಾಗರಾಜ್, ರಿಯಾಜ್ ಅಹಮ್ಮದ್, ಮಂಜುನಾಥ್, ಎಜಾದ್ ಅಹಮ್ಮದ್,ಮಸ್ಕೋದ್, ಕೆ.ರಾಮಣ್ಣ, ಮೇಗಾಯಿಲ್, ಇಲಿಯಾಸ್, ಖಲೀಲ್, ಪಪಂ ಸಿಬ್ಬಂದಿ ರಂಗಯ್ಯ ಇವರುಗಳು ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ವ್ಯಕ್ತಿಗೆ ಕ್ಷೌರ ಮಾಡಿಸಿ, ಸ್ನಾನ ಮಾಡಿಸಿದರು. ನಂತರ ಪಪಂ ಅನುಮತಿ ಪಡೆದು ತಾಲೂಕಿನ ಬಿ.ಎಚ್.ಕೈಮರ ಗ್ರಾಮ ವ್ಯಾಪ್ತಿಯ ಮತ್ತಿಮರದಲ್ಲಿರುವ ದಿವ್ಯಕಾರುಣ್ಯ ಆನಂದ ಆಶ್ರಮಕ್ಕೆ ಆತನನ್ನು ಸೇರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement